• March 14, 2026

ವಿಕ್ರಾಂತ್ ರೋಣ ಬಳಿಕ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಸುದೀಪ್

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲು ಸಿದ್ದವಾಗಿರೋ ವಿಕ್ರಾಂತ್ ರೋಣ ಸಿನಿಮಾದ ಬಳಿಕ ಸುದೀಪ್ ನಟನೆಯ ಮುಂದಿನ ಸಿನಿಮಾ ಯಾವುದು ಅನ್ನೋ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಇದೀಗ ಸ್ವತಃ ಸುದೀಪ್ ಈ ಬಗ್ಗೆ ಸಂದರ್ಶನವೊಂದಲ್ಲಿ ಮಾತನಾಡಿದ್ದಾರೆ. ಸುದೀಪ್ ನಟನೆಯ ಸಿನಿಮಾವೊಂದು ಬಿಡುಗಡೆಗೆ ರೆಡಿಯಾಗಿದೆ ಅನ್ನೋವಾಗ್ಲೆ ಮತ್ತೊಂದು ಸಿನಿಮಾದ ಕುರಿತು ಚರ್ಚೆ ಶುರುವಾಗಿತ್ತು. ಸದ್ಯ ವಿಕ್ರಾಂತ್ ರೋಣ ಬಿಡುಗಡೆ ಆದ ಬಳಿಕ ಇಂಡಿಯನ್ ಫಿಲ್ಮ್ಂ ಮೇಕರ್ ವೆಂಕಟ್ ಪ್ರಭು ಜೊತೆ ಸುದೀಪ್ ಸಿನಿಮಾ ಮಾಡಲಿದ್ದಾರೆ. ತಮಿಳಿನ ಸಾಕಷ್ಟು ಸ್ಟಾರ್ ನಟರ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ವೆಂಕಟ್ ಪ್ರಭು ಕಿಚ್ಚ ಸುದೀಪ್ ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸುದೀಪ್ ಗಾಗಿ ಈಗಾಗ್ಲೆ ವಿಭಿನ್ನ ಕಥೆಯೊಂದನ್ನ ರೆಡಿ ಮಾಡಿಕೊಂಡಿರುವ ವೆಂಕಟ್ ಪ್ರಭು ಕಿಚ್ಚನಿಗೆ ಕಥೆಯನ್ನೂ ಹೇಳಿದ್ದಾರೆ. ಕಥೆ ಮೆಚ್ಚಿಕೊಂಡಿರುವ ಸುದೀಪ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ʻವಿಕ್ರಾಂತ್ ರೋಣʼ ರಿಲೀಸ್‌ಗೆ ರೆಡಿಯಿದೆ ಇದಾದ ಬಳಿಕ ಆಗಸ್ಟ್ 6ರಿಂದ ಬಿಗ್ ಬಾಸ್ ಶೋ ಆರಂಭವಾಗಲಿದೆ. ಬಳಿಕ ವೆಂಕಟ್ ಪ್ರಭು ನಿರ್ದೇಶನದ ಹೊಸ ಚಿತ್ರದ ಶೂಟಿಂಗ್ ನಲ್ಲಿ ಸುದೀಪ್ ಭಾಗಿಯಾಗಲಿದ್ದಾರೆ. ಅಕ್ಟೋಬರ್‌ನಲ್ಲಿ ಶೂಟಿಂಗ್‌ ಶುರುವಾಗಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now