ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಟೌನ್ ನಲ್ಲಿ ರಶ್ಮಿಕಾ ಮಂದಣ್ಣಗೆ ಸಖತ್ ಡಿಮ್ಯಾಂಡ್: ಸ್ಟಾರ್ ನಟನ ಸಿನಿಮಾದಲ್ಲಿ ‘ಕಿರಿಕ್ ಪಾರ್ಟಿ’ ಬ್ಯೂಟಿ
ಹಿಂದಿ ಚಿತ್ರರಂಗದಲ್ಲಿ ಆಶಿಕಿ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಆ ಬಳಿಕ ತೆರೆಕಂಡ ಆಶಿಕಿ 2 ಚಿತ್ರ ಕೂಡ ಬಾಕ್ಸ್ ಆಫೀಸ್ ಲೂಟಿ ಮಾಡಿತ್ತು. ಇದೀಗ `ಆಶಿಕಿ 3′ ಸಿನಿಮಾವನ್ನ ತೆರೆಯ ಮೇಲೆ ತರಲು ಭರ್ಜರಿ ತಯಾರಿ ನಡೆಯುತ್ತಿದೆ. ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಹಾಗೂ ರಶ್ಮಿಕಾರನ್ನ ಜೋಡಿಯಾಗಿ ತೋರಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೊಸ ರೊಮ್ಯಾಂಟಿಕ್ ಕಥೆಯ ಮೂಲಕ ಕಾರ್ತಿಕ್ ಮತ್ತು ರಶ್ಮಿಕಾ ಜೋಡಿ ಸ್ಕ್ರೀನ್ ಮೇಲೆ ಕಮಾಲ್ ಮಾಡೋದು ಪಕ್ಕ ಎನ್ನಲಾಗುತ್ತಿದೆ.
ಸದ್ಯ ರಶ್ಮಿಕಾ ನಟನೆಯ ಗುಡ್ ಬೈ,ಮಿಷನ್ ಮಜ್ನು ಹಾಗೂ ಅನಿಮಲ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇತ್ತೀಚೆಗೆ ಗುಡ್ ಬೈ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಬಾಲಿವುಡ್ ಸಿನಿಮಾಗಳ ಬಿಡುಗಡೆಗೂ ಮೊದಲೇ ರಶ್ಮಿಕಾ ಒಂದರ ಹಿಂದೊದರಂತೆ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿದ್ದು ಕಿರಿಕ್ ಬ್ಯೂಟಿ ಬಿಟೌನ್ ನಲ್ಲಿ ಮೋಡಿ ಮಾಡುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
