• March 20, 2026

ಬಾಲಿವುಡ್ ಸ್ಟಾರ್ ನಟನ ಸಿನಿಮಾಗೆ ನಾಯಕಿಯಾದ ನಟಿ ರಶ್ಮಿಕಾ ಮಂದಣ್ಣ

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಸದ್ಯ ರಶ್ಮಿಕಾ ಮಂದಣ್ಣ ಸಿನಿಮಾ ರಂಗದ ಗೆಲ್ಲುವ ಕುದುರೆಯಾಗಿದ್ದಾರೆ.ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ರಶ್ಮಿಕಾ ಇದೀಗ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಈಕೆಯನ್ನು ನಾಯಕಿಯಾಗಿ ಸಿನಿಮಾದಲ್ಲಿ ಹಾಕಿಕೊಂಡರೆ ನಿರ್ಮಾಪಕರು ಗೆದ್ದಂಗೆ ಎಂಬ ಮಾತು ಕೇಳಿ ಬರ್ತಿದೆ. ಇದೇ ಕಾರಣಕ್ಕೆ ಸ್ಟಾರ್ ನಿರ್ದೇಶಕರು ರಶ್ಮಿಕಾ ಮಂದಣ್ಣ ಹಿಂದೆ ಬಿಳ್ತಿದ್ದಾರೆ. ಈಗಾಗ್ಲೆ ಕನ್ನಡ, ತೆಲುಗು,ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಟಿಸಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಬಾಲಿವುಡ್​ ಸಿನಿ ರಂಗದಲ್ಲಿ ಸಾಕಷ್ಟು ಭೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ನಟನೆಯ ‘ಮಿಷನ್ ಮಜ್ನು’ ಹಾಗೂ ‘ಗುಡ್​ಬೈ’ ಚಿತ್ರಗಳು ರಿಲೀಸ್​ಗೆ ರೆಡಿ ಇದೆ. ‘ಮಿಷನ್ ಮಜ್ನು’ ಚಿತ್ರಕ್ಕೆ ಸಿದ್ದಾರ್ಥ್ ಮಲ್ಹೋತ್ರಾ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಗುಡ್​ಬೈ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್​ ಜೊತೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದೆ. ಈ ಮಧ್ಯೆ ರಶ್ಮಿಕಾ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್​ನಲ್ಲಿ ಛಾಪು ಮೂಡಿಸಿರುವ ಕಾರ್ತಿಕ್ ಆರ್ಯನ್ ಚಿತ್ರಕ್ಕೆ ರಶ್ಮಿಕಾ ನಾಯಕಿ ಎಂಬ ಸುದ್ದಿ ಹರಿದಾಡುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now