• March 15, 2026

ನಯನತಾರಾಗೆ ಅವಮಾನ ಮಾಡಿಲ್ಲ: ಸ್ಪಷ್ಟನೆ ನೀಡಿದ ಕರಣ್ ಜೋಹರ್

ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಬಾರಿ ಸೀಸನ್ 7 ಮೂಲಕ ಕರಣ್ ಜೋಹರ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕರಣ್ ಕೇಳುವ ನೇರಾ ನೇರಾ ಪ್ರಶ್ನೆಗಳಿಂದ ಸಾಕಷ್ಟು ಭಾರಿ ವಿವಾದಗಳು ಹುಟ್ಟಿಕೊಂಡಿದೆ. ಸದ್ಯ ಕರಣ್ ಜೋಹರ್ ಕೇಳಿದ ಪ್ರಶ್ನೆಯೊಂದಕ್ಕೆ ನಯನತಾರಾ ಅಭಿಮಾನಿಗಳು ಫುಲ್ ಗರಂ ಆಗಿದ್ದು, ಈ ಬಗ್ಗೆ ಕರಣ್ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ನಟಿ ಸಮಂತಾ ಭಾಗಿಯಾಗಿದ್ದರು. ಸಮಂತ ಹಾಗೂ ನಯನತಾರಾ ಉತ್ತಮ ಗೆಳತಿಯರು. ಶೋನಲ್ಲಿ ಭಾಗಿಯಾಗಿದ್ದ ಸಮಂತಾಗೆ ಕರಣ್ ‘ದಕ್ಷಿಣದ ಟಾಪ್ ತಾರೆ ಯಾರು?’ ಎನ್ನುವ ಪ್ರಶ್ನೆಯನ್ನು ಕೇಳುತ್ತಾರೆ. ಕ್ಷಣವೂ ಯೋಚನೆ ಮಾಡದ ಸಮಂತಾ ನಯನತಾರಾ ಹೆಸರು ಹೇಳಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಕರಣ್ ಜೋಹರ್, ಇವರ ಹೆಸರು ನನ್ನ ಪಟ್ಟಿಯಲ್ಲಿ ಇಲ್ಲ ಎಂದು ಹೇಳುತ್ತಾರೆ. ಈ ಮಾತೇ ನಯನತಾರಾ ಅಭಿಮಾನಿಗಳನ್ನು ಕೆರಳಿಸಿದ್ದು, ಕರಣ್ ಜೋಹರ್ ಹಾಗೂ ಅವರ ಶೋಗಳನ್ನು ನಯನತಾರಾ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.ಜೊತೆಗೆ ಕರಣ್ ವ್ಯಕ್ತಿತ್ವದ ಬಗ್ಗೆಯೂ ಅವಹೇಳನ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವಷ್ಟನೆ ನೀಡಿದ ಕರಣ್ ಜೋಹರ್, ನಾನು ನಯನತಾರಾ ಅವರಿಗೆ ಅವಮಾನ ಮಾಡಿಲ್ಲ. ನಾನು ಕೇಳಿದ ಪ್ರಶ್ನೆಗೆ ನನ್ನ ಪಟ್ಟಿಯಲ್ಲಿ ಆ ಉತ್ತರವಿರಲಿಲ್ಲ. ಅಲ್ಲದೇ, ಅವರು ಟಾಪ್ ಅನ್ನುವುದನ್ನು ಯಾವುದೇ ಸಂಸ್ಥೆ ಅಧಿಕೃತ ಮಾಡಿರಲಿಲ್ಲ. ಹೀಗಾಗಿ ನಾನು ಹಾಗೆ ಮಾತನಾಡಬೇಕಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ. ಕರಣ್ ಸ್ಪಷ್ಟನೆ ನೀಡಿದ್ದರು ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿಮಾನಿಗಳ ಆಕ್ರೋಶ ಮಾತ್ರ ಕೊಂಚವು ಕಮ್ಮಿಯಾಗಿಲ್ಲ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now