• March 15, 2026

ಕಾಂತಾರ ನೋಡಲು ಹೋಗಿದ್ದ ವಾಸುಕಿ ವೈಭವ್ ಹಾಗೂ ಗುಂಪಿನ ನಡುವೆ ಗಲಾಟೆ

ಕನ್ನಡದ ಖ್ಯಾತ ಗಾಯಕ ವಾಸುಕಿ ವೈಭವ್ ಸ್ನೇಹಿತರ ಜೊತೆ ಕಾಂತಾರ ಸಿನಿಮಾ ನೋಡಲು ಹೋದ ವೇಳೆ ಮತ್ತೊಂದು ಗುಂಪಿನ ನಡುವೆ ಗಲಾಟೆ ನಡೆದಿದೆ. ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರ ಮಧ್ಯಸ್ಥಿಕೆಯಿಂದ ಜಗಳ ತಿಳಿಸಿಗೊಳಿಸಲಾಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ವೀಕ್ಷಿಸಲು ವಾಸುಕಿ ವೈಭತ್ ಸ್ನೇಹಿತರ ಜೊತೆ ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ತೆರಳಿದ್ದಾರೆ. ಈ ವೇಳೆ ಅದೇ ಥಿಯೇಟರ್ ಗೆ ಸಿನಿಮಾ ನೋಡಲು ಹೋಗಿದ್ದು ಗುಂಪು ವಾಸುಕಿ ಅವರ ಜೊತೆ ಜಗಳವಾಡಿದ್ದು ಜಗಳ ತಾರಕ್ಕಕ್ಕೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಕ್ಟೋಬರ್ 3 ರಂದು ಸಂಜೆ ಗಾಯಕ ವಾಸುಕಿ ವೈಭವ್, ಸ್ನೇಹಿತ ದರ್ಶನ್ ಗೌಡ ಹಾಗೂ ಸ್ನೇಹಿತೆ ಮೂವರು ಕಾಂತಾರ ಸಿನಿಮಾ ವೀಕ್ಷಿಸಲು ಊರ್ವಶಿ ಚಿತ್ರಮಂದಿಕ್ಕೆ ಹೋಗಿದ್ದಾರೆ. ಈ ವೇಳೆ ಥಿಯೇಟರ್ ಗೆ ಸಿನಿಮಾ ನೋಡಲು ಬಂದಿದ್ದ ನಾಲ್ಕೈದು ಜನರ ಗುಂಪೊಂದು ವಾಸುಕಿ ಕುಳಿತಿದ್ದ ಸೀಟ್ ಮುಂದೆ ಹೋಗುವಾಗ ಈ ಗಲಾಟೆ ಮಾಡಿದೆ ಎನ್ನಲಾಗುತ್ತಿದೆ. ಸಿನಿಮಾ ನೋಡುತ್ತ ಕುಳಿತಿದ್ದ ವಾಸುಕಿ ವೈಭವ್ ಮುಂದಿನ ಸೀಟ್ ನಲ್ಲಿ ನಾಲ್ಕೈದು ಜಗರಿದ್ದ ಗುಂಪು ಬಂದಿದೆ. ಈ ವೇಳೆ ಸಿನಿಮಾ ಶುರುವಾಗಿದ್ದು ಬೇಗ ಹೋಗಿ ಕುಳಿತುಕೊಳ್ಳುವಂತೆ ವಾಸುಕಿ ಸ್ನೇಹಿತ ದರ್ಶನ್ ಹೇಳಿದ್ದಾರೆ. ಇದರಿಂದ ಕೋಪಗೊಂಡ ಗುಂಪು ವಾಸುಕಿ ವೈಭವ್ ಹಾಗೂ ಸ್ನೇಹಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಇದರಿಂದ ಕೋಪಗಪಂಡ ವಾಸಕಿ ವೈಭವ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅಷ್ಟು ಮಂದಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ, ವಾಸುಕಿ ವೈಭವ್ ಕೇಸ್ ದಾಖಲಿಸುವುದು ಬೇಡ ಎಂಬ ಕ್ಷಮೆ ಕೇಳಿದರೆ ಸಾಕು ಎಂದಿದ್ದಾರೆ, ಹೀಗಾಗಿ ಗಲಾಟೆ ಮಾಡಿದ ಗುಂಪು ವಾಸಕಿ ವೈಭವ್ ಹಾಗೂ ಸ್ನೇಹಿತೆಯ ಬಳಿ ಕ್ಷಮೆ ಯಾಚಿಸಿದೆ. ಬಳಿಕ ಎರಡು ಕಡೆಯವರಿಗೆ ಸಮಾಧಾನ ಮಾಡಿ ಪೊಲೀಸರು ಕಳುಹಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now