ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಂದು ಒಂದೇ ಒಂದು ಶೋಗಾಗಿ ಕಾಡಿ ಬೇಡಿದ್ದ ರಿಷಬ್ ಶೆಟ್ಟಿ: ಇಂದು ಎಲ್ಲೆಲ್ಲೂ ಕಾಂತಾರದ್ದೆ ಕಮಾಲ್
ರಿಷಬ್ ಶೆಟ್ಟಿ ಸಿನಿ ಕರಿಯರ್ ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕಾಂತಾರ ಎನ್ನಲಾಗುತ್ತಿದೆ. ಕಾಂತಾರ ರಿಷಬ್ ಶೆಟ್ಟಿ ನಿರ್ದೇಶನದ ನಾಲ್ಕನೇ ಸಿನಿಮಾ. ಮೊದಲ ರಿಕ್ಕಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ರಿಷಬ್ ಶೆಟ್ಟಿ ಚಿತ್ರವನ್ನು ಥಿಯೇಟರ್ ಗೆ ಎಂಟ್ರಿಕೊಡಿಸೋಕೆ ಸಾಕಷ್ಟು ಕಷ್ಟ ಪಟ್ಟಿದ್ದರು. ಮಂಗಳೂರಿನ ಚಿತ್ರಮಂದಿರಗಳಲ್ಲಿ ರಿಕ್ಕಿ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರು.
ಥಿಯೇಟರ್ ಮಾಲಿಕರನ್ನು ಕಾಡಿ ಬೇಡಿ ರಿಕ್ಕಿ ಸಿನಿಮಾವನ್ನು ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ಪ್ರದರ್ಶಿಸಿದ್ದರು. ಜೊತೆಗೆ ಸಿನಿಮಾ ನೋಡಲು ಇಚ್ಚಿಸುವವರು ನಾಳೆಗೆ ಟಿಕಟ್ ಬುಕ್ ಮಾಡಿ ಎಂದು ಟ್ವೀಟ್ ಮಾಡಿದ್ದರು. ಇದೀಗ ರಿಷಬ್ ಶೆಟ್ಟಿ ಅಭಿಮಾನಿಯೊಬ್ಬರು ಆ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ.
ಅಂದು ಒಂದೇ ಒಂದು ಶೋಗಾಗಿ ಕಾಡಿ ಬೇಡಿದ್ದ ರಿಷಬ್ ಶೆಟ್ಟಿ ಇಂದು ಪ್ರತಿಯೊಂದು ಚಿತ್ರಮಂದಿರಗಳಲ್ಲೂ ರಾರಾಜಿಸುತ್ತಿದ್ದಾರೆ. ಥಿಯೇಟರ್ ಮಾಲಿಕರು ಕಾಂತಾರಕ್ಕಾಗಿ ಮುಗಿ ಬಿದ್ದಿದ್ದಾರೆ. ಪರಭಾಷೆಯ ಮಂದಿ ಕಾಂತಾರ ನೋಡಿ ಮೆಚ್ಚಿಕೊಂಡಿದ್ದು ರಿಷಬ್ ಶೆಟ್ಟಿ ನಟನೆಗೆ ಹ್ಯಾಟ್ಸ್ ಆಫ್ ಎಂದಿದ್ದಾರೆ.
