ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಇಶಾ ಪೌಂಡೇಷನ್ ನಲ್ಲಿ ಒಟ್ಟಿಗೆ ಕಾಂತಾರ ವೀಕ್ಷಿಸಿದ 3000 ಜನ
ಹಿಟ್ ಕನ್ನಡ ಸಿನಿಮಾ ಕಾಂತಾರ ಬಾಕ್ಸ್ ಆಫೀಸ್ ದಾಖಲೆಗಳನ್ನು ಬ್ರೇಕ್ ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ತಂಡ ಕೊಯಮತ್ತೂರಿನ ಇಶಾ ಯೋಗ ಸೆಂಟರ್ನಲ್ಲಿ ದೀಪಾವಳಿ ಹಬ್ಬದ ಸಂದರ್ಭ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ಅವರಿಗೆ ವಿಶೇಷ ಧನ್ಯವಾದಗಳು ಎಂದು ಇಶಾ ಫೌಂಡೇಷನ್ ಟ್ವೀಟ್ ಮೂಲಕ ತಿಳಿಸಿದೆ. ಅಲ್ಲದೆ ಮೂರು ಸಾವಿರ ಜನ ಒಟ್ಟಿಗೆ ಚಿತ್ರ ವೀಕ್ಷಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದೆ.
ಕರಾವಳಿಯ ಭೂತ ಕೋಲದ ಕುರಿತಾದ ಕಾಂತಾರ ಚಿತ್ರವನ್ನು ಇಡೀ ಜಗತ್ತೆ ಮೆಚ್ಚಿಕೊಂಡಿದೆ. ಈಗಾಗ್ಲೆ ಸಾಕಷ್ಟು ಸ್ಟಾರ್ ನಟ, ನಟಿಯರು ಕಾಂತಾರ ವೀಕ್ಷಿಸಿದ್ದು ಮೆಚ್ಚುಗೆಯ ಮಾತನಾಡಿದ್ದಾರೆ. ಅಲ್ಲದೆ ಪ್ರತಿಯೊಬ್ಬರು ಕಾಂತಾರ ಚಿತ್ರವನ್ನು ವೀಕ್ಷಿಸಿ ಎಂದಿದ್ದರು.
ಇತ್ತೀಚೆಗೆ ಕೇರಳದಲ್ಲಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಈ ವೇಳೆ ಚಿತ್ರಮಂದಿರದ ಫೋಟೋವನ್ನು ಶೇರ್ ಮಾಡಲಾಗಿತ್ತು.
