ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಂತಾರ ಭರ್ಜರಿ ಕಲೆಕ್ಷನ್: 100 ಕೋಟಿ ಕ್ಲಬ್ ಸೇರಿ ದಾಖಲೆ ಬರೆದ ರಿಷಬ್ ಸಿನಿಮಾ
ಕಾಂತಾರ ಸಿನಿಮಾವನ್ನು ಕನ್ನಡದಲ್ಲೇ ಸಾಕಷ್ಟು ಪರಭಾಷೆಯ ಸ್ಟಾರ್ ಗಳು ನೋಡಿ ಮೆಚ್ಚಿಕೊಂಡಿದ್ದರು. ಅಲ್ಲದೆ ಬೇರೆ ಬೇರೆ ಭಾಷೆಗೂ ಡಬ್ಬಿಂಗ್ ಮಾಡುವಂತೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾಂತಾರ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೂ ಡಬ್ ಆಗಿ ರಿಲೀಸ್ ಆಗಿದ್ದು ಅಲ್ಲೂ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ.
ಹಿಂದಿಯಲ್ಲಿ 8 ಕೋಟಿ, ತೆಲುಗಿನಲ್ಲಿ 10 ಕೋಟಿ ಸೇರಿದಂತೆ ಎಲ್ಲಾ ಭಾಷೆಯಲ್ಲೂ ಕೋಟ್ಯಾಂತರ ರೂಪಾಯಿ ಕಲೆಕ್ಷನ್ ಮಾಡಿದೆ. ಕಾಂತಾರ ಚಿತ್ರ ಬಿಡುಗಡೆ ಆದ ಸಂದರ್ಭದಲ್ಲಿಯೇ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಹಾಗೂ ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾ ಬಿಡುಗಡೆ ಆಗಿತ್ತು. ಈ ಎರಡು ಸಿನಿಮಾಗಳನ್ನು ಹಿಂದಿಕ್ಕಿ ಕಾಂತಾರ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ.
