• January 1, 2026

ಲವ್ ಜಿಹಾದ್ ಆರೋಪ: ಗಂಡನ ಕಿರುಕುಳ ನೆನೆದು ಕಣ್ಣೀರಿಟ್ಟ ಕನ್ನಡದ ಕಿರುತೆರೆ ನಟಿ

ಕನ್ನಡದ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಪತಿಯ ಕಿರುಕುಳದಿಂದ ಬೇಸತ್ತು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಧಾರವಾಹಿಯ ಸಹನಟನ ಜೊತೆ ಹಸೆಮಣೆ ಏರಿದ್ದ ದಿವ್ಯಾ ಪತಿಯ ವರ್ತನೆಯಿಂದಾಗಿ ಇದೀಗ ಆಸ್ಪತ್ರೆ ಸೇರುವಂತಾಗಿದೆ. ಕಷ್ಟದ ಕಾಲದಲ್ಲಿ ಕೈ ಹಿಡಿದ ಹೆಂಡಿತಯನ್ನು ಪತಿ ಅಮ್ಜದ್ ಖಾನ್ ಹೀನಾಯವಾಗಿ ನಡೆಸಿಕೊಂಡಿದ್ದಾಗಿ ಆರೋಪ ಕೇಳಿ ಬಂದಿದೆ. 2015ರಲ್ಲಿ ಪ್ರಸಾರವಾದ ತಮಿಳಿನ ಕೆಳದಿ ಕಣ್ಮಣಿ ಧಾರವಾಹಿಯಲ್ಲಿ ದಿವ್ಯಾ ಹಾಗೂ ಅಮ್ಜದ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ ಆರಂಭವಾಗಿದ್ದು ಕಳೆದ 2017ರಿಂದ ಇವರಿಬ್ಬರು ಲಿವೀಂಗ್ ಟುಗೇದರ್ ನಲ್ಲಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಅಮ್ಜದ್ ಖಾನ್ ಗೆ ಕೆಲಸ ಇಲ್ಲದ ವೇಳೆ ಅಮ್ಜದ್ ಖಾನ್ ನನ್ನು ದಿವ್ಯಾ ಶ್ರೀಧರ್ ನೋಡಿಕೊಂಡಿದ್ದರು. ಲಾಕ್ ಡೌನ್ ಬಳಿಕ ಅಂದರೆ ಕಳೆದ ಜೂನ್ 2022ರಲ್ಲಿ ಈ ಜೋಡಿ ಹಸೆಮಣೆ ಏರಿತ್ತು. ಮದುವೆಯಾಗಿ ನಾಲ್ಕು ತಿಂಗಳು ಕಳೆಯುವುದರೊಳಗೆ ಈ ಜೋಡಿಯ ಮಧ್ಯೆ ಬಿರುಕು ಮೂಡಿದೆ. ಇತ್ತೀಚೆಗಷ್ಟೇ ದಿವ್ಯಾ ಹಾಗೂ ಅಮ್ಜದ್ ಚೆನ್ನೈನಲ್ಲಿ ಹೊಸ ಮನೆ ಖರೀದಿಸಿದ್ದರು. ಅಲ್ಲದೆ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಹೇಳಿ ಖುಷಿಹಂಚಿಕೊಂಡಿದ್ದರು. ಇದೀಗ ದಿವ್ಯಾ ಮೂರು ತಿಂಗಳ ಗರ್ಭಿಣಿಯಾಗಿದ್ದು ಗಂಡನ ನೀಡುತ್ತಿರುವ ಕಿರುಕುಳದಿಂದ ಬೇಸತ್ತು ಹೋಗಿದ್ದಾರೆ. ಅಲ್ಲದೆ ಆತನ ವರ್ತನೆಯಿಂದಾಗಿ ಆಸ್ಪತ್ರೆಗೆ ದಾಖಲಾಗುವಂತಾಗಿದೆ. ‘ನೀನು ಕನ್ನಡದ ನಟಿ. ನಮ್ಮ ರಾಜ್ಯಕ್ಕೆ ಬಂದು ಏನೂ ಮಾಡೋಕೆ ಆಗುವುದಿಲ್ಲ. ಇಲ್ಲಿ ನನ್ನ ಕಡೆಯವರು ತುಂಬಾ ಜನ ಇದ್ದಾರೆ’ ಎಂದು ಅಮ್ಜದ್ ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಆಕೆ ಮೂರು ತಿಂಗಳ ಗರ್ಭಿಣಿ ಎಂಬುದನ್ನು ಲೆಕ್ಕಿಸದೆ ಆಕೆಯ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದಾನೆ. ಸದ್ಯ ದಿವ್ಯಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ದಿವ್ಯಾ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿ ಅಮ್ಜದ್ ಮದುವೆ ಆಗಿದ್ದರು. ಮುಸ್ಲಿಂ ಧರ್ಮದ ಪ್ರಕಾರ ಮದುವೆ ನಡೆದಿದೆ ಎನ್ನಲಾಗಿದ್ದು ಮದುವೆ ವಿಚಾರ ಗುಟ್ಟಾಗಿ ಇಡುಲು ಅಮ್ಜದ್​ ನಿರ್ಧರಿಸಿದ್ದರು. ಇದೀಗ ದಿವ್ಯಾ ಗರ್ಭಿಣಿ ಆದ ಬಳಿಕ ಈ ವಿಚಾರವನ್ನು ತಮ್ಮ ಗೆಳತಿಯರ ಜತೆ ಹೇಳಿಕೊಂಡಿದ್ದಾರೆ. ಮದುವೆಯಾದ ವಿಷಯ ಸ್ನೇಹಿತೆಯರ ಬಳಿ ಹೇಳಿಕೊಂಡ ಕಾರಣಕ್ಕೆ ಅಮ್ಜದ್ ಖಾನ್ ಗಲಾಟೆ ಮಾಡಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now