ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸಿನಿಮಾಗೆ ನಂದ ಕಿಶೋರ್ ನಿರ್ದೇಶನ
ನಂದಕಿಶೋರ್ ಹಾಗೂ ಮೋಹನ್ ಲಾಲ್ ಕಾಂಬಿನೇಷನ್ ನ ಸಿನಿಮಾಗೆ ವೃಷಭ ಎಂದು ಟೈಟಲ್ ಇಡಲಾಗಿದೆ. ಎವಿಎಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಲಿರೋ ವೃಷಭ ಸಿನಿಮಾಗೆ ಅಭೀಷೇಕ್ ವ್ಯಾಸ್, ಪ್ರವೀಣ್ ಸಿಂಗ್ ಮತ್ತು ಶ್ಯಾಂಸ್ ಸುಂದರ ಬಂಡವಾಳ ಹೂಡುತ್ತಿದ್ದಾರೆ. ಎವಿಎಸ್ ಸ್ಟುಡಿಯೋ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಇಂತಹ ಸಿನಿಮಾಗೆ ನಿಮ್ಮ ಬೆಂಬಲವಿರಲಿ ಎಂದು ಮೋಹನ್ ಲಾಲ್ ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ.
ಪಕ್ಕ ಕಮರ್ಷಿಯಲ್ ಸಿನಿಮಾವಾಗಿರೋ ವೃಷಭದಲ್ಲಿ ನಾಯಕ ಹಲವು ಆಯಾಮಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 2023ರ ಜುಲೈ ತಿಂಗಳಿನಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು ತೆಲುಗಿನ ಸ್ಟಾರ್ ನಟರೊಬ್ಬರು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
