• January 1, 2026

ಇಂಡೋನೇಷ್ಯಾದಲ್ಲೂ ಕಾಂತಾರದ ಕಮಾಲ್: ಧನ್ಯವಾದ ಹೇಳಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತ ಮುನ್ನಗುತ್ತಿರುವ ಕಾಂತಾರ ಬಿಡುಗಡೆ ಆಗಿ ತಿಂಗಳ ಬಳಿಕ ಸಾಕಷ್ಟು ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ, ಸದ್ಯ ಇಂಡೋನೇಷ್ಯಾದಲ್ಲೂ ಕಾಂತಾರ ಕಮಾಲ್ ಮಾಡುತ್ತಿದ್ದು, ಇಂಡೋನೇಷ್ಯಾದಲ್ಲಿ ರಿಲೀಸ್ ಆಗಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಕಾಂತಾರ ಪಾತ್ರವಾಗಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಪ್ಟೆಂಬರ್ 30ರಂದು ತೆರೆಕಂಡ ಕಾಂತಾರ ಚಿತ್ರ ಗಡಿ ದಾಟಿ ಸದ್ದು ಮಾಡುತ್ತಿದೆ. ಈಗಾಗ್ಲೆ ದೇಶ, ವಿದೇಶದಲ್ಲೂ ಕಾಂತಾರಕ್ಕೆ ಜನ ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಲ್ಲದೆ ಸಾಕಷ್ಟು ಸ್ಟಾರ್ ನಟ, ನಟಿಯರು ಕಾಂತಾರದ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ. ಇದೀಗ ಮೊಟ್ಟ ಮೊದಲ ಬಾರಿಗೆ ಇಂಡೋನೇಷ್ಯಾದಲ್ಲಿ ಕನ್ನಡದ ಕಾಂತಾರ ರಿಲೀಸ್ ಆಗುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಕಾಂತಾರ ಸಿನಿಮಾ ನೋಡಿ ಇಂಡೋನೇಷ್ಯಾದ ಕನ್ನಡಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಒಟ್ಟು ನಾಲ್ಕು ಶೋಗಳನ್ನ ಪ್ರದರ್ಶಿಸಲಾಗಿದ್ದು, ನಾಲ್ಕು ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿದೆ. `ಕಾಂತಾರ’ ಸಿನಿಮಾವನ್ನ ಇಂಡೋನೇಷ್ಯಾದ ಕನ್ನಡಿಗರು ನೋಡಿ ಖುಷಿಪಟ್ಟಿರೋದಕ್ಕೆ ರಿಷಬ್ ಶೆಟ್ಟಿ ವಿಡಿಯೋ ಮೂಲಕ ಧನ್ಯವಾದ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now