ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕನ್ನಡ ಕಿರುತೆರೆ ಧಾರವಾಹಿ ನಿರ್ದೇಶಕ ಸಯ್ಯದ್ ಅಶ್ರಫ್ ನಿಧನ
ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಸೇರಿದಂತೆ ಸಾವಿರಾರು ಕಂತುಗಳಲ್ಲಿ ಪ್ರಸಾರವಾಗಿರುವ ಧಾರಾವಾಹಿಗಳಿಗೆ ಸಯ್ಯದ್ ಅಶ್ರಫ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಬಿ.ಸುರೇಶ ಅವರ ಸಾರಥ್ಯದಲ್ಲಿ ಮೂಡಿ ಬಂದ ಹಲವಾರು ಧಾರಾವಾಹಿಗಳಿಗೆ ಅಶ್ರಫ್ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಮೀಡಿಯಾ ಹೌಸ್ ಸ್ಟುಡಿಯೋ ನಿರ್ಮಾಣದಲ್ಲಿ ಹತ್ತು ವರ್ಷಗಳ ಕಾಲ ಧಾರಾವಾಹಿಗಾಗಿ ದುಡಿದಿದ್ದ ಅಶ್ರಫ್ ನಿಧನ ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಸಯ್ಯದ್ ಅಶ್ರಫ್ ನಿಧನಕ್ಕೆ ಬಿ.ಸುರೇಶ, ಶೈಲಜಾ ನಾಗ್ ಹಾಗೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ. ಮಧ್ಯಾಹ್ನದವರೆಗೂ ಅಶ್ರಫ್ ಅವರ ಸ್ವಗೃಹದಲ್ಲಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ನಂತರ ಅಂತ್ಯ ಸಂಸ್ಕಾರ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
