• January 1, 2026

ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ಆರ್ಯನ್ ಸಂತೋಷ್

ಡಿಯರ್ ಸತ್ಯ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಆರ್ಯನ್ ಸಂತೋಷ್ ಇದೀಗ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿಯೇ ಆಕ್ಷನ್, ಥ್ರಿಲ್ಲರ್ ಚಿತ್ರಕ್ಕೆ ಬಣ್ಣ ಹಚ್ಚಿರುವ ಆರ್ಯನ್ ಸಂತೋಷ್ ಮಾಲಿವುಡ್ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ನೂರು ಜನ್ಮಕ್ಕೂ ಸಿನಿಮಾದ ಮೂಲಕ ಆರ್ಯನ್ ಸಂತೋಷ್ ಮಾಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಅರುಣ್ ಗೋಪಿ ನಿರ್ದೇಶನದ ದಿಲೀಪ್ ನಿರ್ಮಾಣದ ಚಿತ್ರದಲ್ಲಿ ಸಂತೋಷ್ ಆರ್ಯನ್ ಬಣ್ಣ ಹಚ್ಚಿದ್ದು ಚಿತ್ರದಲ್ಲಿ ತನಿಖೆಯನ್ನು ನಿರ್ವಹಿಸುವ ಮುಂಬೈ ಅಪರಾಧ ವಿಭಾಗದ ಐಪಿಎಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ದಿಲೀಪ್ ಅಭಿನಯದ ಸಾಕಷ್ಟು ಚಿತ್ರಗಳನ್ನು ನೋಡಿದ್ದೇನೆ ಮತ್ತು ಅವರೊಂದಿಗೆ ಕೆಲಸ ಮಾಡಲು ನನಗೆ ಸಂತೋಷವಾಗಿದೆ. ನಾನು ಈ ಸಿನಿಮಾದ ಭಾಗವಾಗಿದ್ದೇನೆ ಎಂದು ತಿಳಿದ ನಂತರ ದಿಲೀಪ್ ಅಭಿಮಾನಿಗಳಿಂದ ನನಗೆ ಸಾಕಷ್ಟು ಸಂದೇಶಗಳು ಬರುತ್ತಿವೆ. ಈ ದೊಡ್ಡ ಬಜೆಟ್ ಚಿತ್ರವು ದಿಲೀಪ್ ಮತ್ತು ಅರುಣ್ ಗೋಪಿ ಅವರ ರಾಮಲೀಲಾ ಸಂಯೋಜನೆಯನ್ನು ಮತ್ತೆ ಒಂದುಗೂಡಿಸುತ್ತದೆ ಎಂದು ಸಂತೋಷ್ ಆರ್ಯನ್ ಹೇಳಿದ್ದಾರೆ. ಚಿತ್ರದಲ್ಲಿ ನಟಿ ತಮನ್ನಾ, ನಟ ಡಿನೋ ಮೋರಿಯಾ ಮತ್ತು ಶರತ್‌ಕುಮಾರ್ ಕೂಡ ಬಣ್ಣ ಹಚ್ಚಿದ್ದು, ಈಗಾಗಲೇ ಒಂದು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಎರಡನೇ ಹಂತದ ಚಿತ್ರೀಕರಣವನ್ನು ಮುಂಬೈ ಮತ್ತು ಗುಜರಾತ್‌ನಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now