• January 2, 2026

ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಬೋಗಸ್:  ಅನುಮಾನ ವ್ಯಕ್ತಪಡಿಸಿದ ನಟಿ ಕಂಗನಾ ರಣಾವತ್

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಬಾಯ್ಕಾಟ್ ನಡುವೆ ಥಿಯೇಟರ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಸದ್ದು ಮಾಡುತ್ತಿರೋದ್ರಿಂದ ಬಿಟೌನ್ ಮಂದಿ ಕೊಂಚ ನಿರಾಳರಾಗಿದ್ದಾರೆ. ಆದರೆ ಬ್ರಹ್ಮಾಸ್ತ್ರ ಸಿನಿಮಾದ ಕುರಿತು ನಟಿ ಕಂಗಾನಾ ರಾಣವತ್ ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಯ್ಕಾಟ್ ಮಧ್ಯೆ ತೆರೆಗೆ ಬಂದಿರೋ ಬ್ರಹ್ಮಾಸ್ತ್ರ ಸಿನಿಮಾ ಎರಡನೇ ದಿನವೇ ವಿಶ್ವದಾದ್ಯಂತ 160 ಕೋಟಿ ಕಲೆಕ್ಷನ್ ಮಾಡಿದೆ. ಇದನ್ನು ಸ್ವತಃ ಚಿತ್ರದ ನಿರ್ಮಾಪಕ ಕರಣ್ ಜೋಹರ್ ತಿಳಿಸಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬೇರೆ ಬೇರೆ ಭಾಷೆಗೆ ಡಬ್ ಆಗಿ ಬಿಡುಗಡೆ ಆಗಿದ್ದು ಚಿತ್ರದ ಕಲೆಕ್ಷನ್ ಕುರಿತು ಸಾಕಷ್ಟು ಮಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಗಳಿಂದಲೇ ನಟಿ ಕಂಗನಾ ಬಿಟೌನ್ ನಲ್ಲಿ ಸಾಕಷ್ಟು ಮಂದಿಯನ್ನು ಎದುರು ಹಾಕಿಕೊಂಡಿದ್ದಾರೆ. ಅದರಲ್ಲೂ ನಿರ್ಮಾಪಕ ಹಾಗೂ ನಟ ಕರಣ್ ಜೋಹರ್ ಕಂಡರೆ ಕಂಗನಾಗೆ ಆಗುವುದೇ ಇಲ್ಲ. ಕರಣ್ ನಿರ್ಮಾಣದಲ್ಲಿ ಮೂಡಿ ಬರುವ ಪ್ರತಿ ಸಿನಿಮಾ ಹಾಗೂ ಕರಣ್ ಜೋಹರ್ ನಡೆಸಿಕೊಡುವ ಶೋಗಳನ್ನು ಮೊದಲಿನಿಂದಲೂ ಕಂಗನಾ ವಿರೋಧಿಸಿಕೊಂಡೆ ಬಂದಿದ್ದಾರೆ. ಅಂತೆಯೇ ಇದೀಗ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಎಲ್ಲ ಬೋಗಸ್ ಎನ್ನುತ್ತಿದ್ದಾರೆ. ಕರಣ್ ಜೋಹರ್ ಹೇಳಿದಂತೆ ಬ್ರಹ್ಮಾಸ್ತ್ರ ಸಿನಿಮಾ ಅಷ್ಟೊಂದು ಕಲೆಕ್ಷನ್ ಮಾಡಿಲ್ಲ ಎಂದು ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಂಥಹ ಪೋಸ್ಟ್ ಗಳನ್ನು ಕಂಗನಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಾವೂ ಕೂಡ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಲೆಕ್ಕಚಾರ ಸುಳ್ಳು ಎನ್ನುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now