• March 18, 2026

ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಭೋಗಸ್, ಇದು ಮೂವಿ ಮಾಫಿಯಾ: ನಟಿ ಕಂಗನಾ ರಾಣವತ್

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಕುರಿತು ಇನ್ ಡೈರೆಕ್ಟಗಿ ಆಗಿ ಹೇಳಿದ್ದ ನಟಿ ಕಂಗನಾ ರಣಾವತ್ ಇದೀಗ ಡೈರೆಕ್ಟ್ ಆಗಿ ಟೀಕಿಸಿದ್ದಾರೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಕುರಿತು ವೆಬ್ ಸೈಟ್ ಒಂದು ಪ್ರಕಟಿಸಿರುವ ಮಾಹಿತಿ ಕುರಿತು ಪೋಸ್ಟ್ ಮಾಡಿರುವ ಕಂಗನಾ ಮೂವಿ ಮಾಫಿಯಾ ಎಂದಿದ್ದಾರೆ. ನಟಿ ಕಂಗನಾ ರಾಣವತ್ ತಮ್ಮ ನೇರಾ ನೇರಾ ಮಾತುಗಳಿಂದ ಸಿನಿಮಾ ರಂಗದ ಅನೇಕರನ್ನು ಎದುರು ಹಾಕಿಕೊಂಡಿದ್ದಾರೆ. ಆದರೂ ಇದ್ಯಾವುದಕ್ಕೂ ಕ್ಯಾರೆ ಎನ್ನದ ನಟಿ ತಮಗೆ ಅನಿಸಿದ್ದನ್ನು ಡೈರೆಕ್ಟ್ ಆಗಿ ಹೇಳಿ ಜನಗಳಿಂದ ಶಹಭಾಷ್ ಎನಿಸಿಕೊಳ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಕುರಿತಾಗಿ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಅವುಗಳನ್ನು ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದಾದ ಕೆಲವೇ ದಿನಗಳಲ್ಲಿ ಮತ್ತೆ ಬ್ರಹ್ಮಾಸ್ತ್ರದ ಕಲೆಕ್ಷನ್ ಅನ್ನೂ ಮೂವಿ ಮಾಫಿಯಾ ಎಂದಿದ್ದಾರೆ. ಕಂಗನಾ ಮಾತನ್ನು ಸಾಕಷ್ಟು ಮಂದಿ ನಂಬಿದ್ದಾರೆ. ಯಾಕೆಂದರೆ ಬ್ರಹ್ಮಾಸ್ತ್ರ ಸಿನಿಮಾದ ವಿಮರ್ಶೆ ಅಷ್ಟೇ ಕಷ್ಟೇ ಅನ್ನೋ ಮಟ್ಟಿಗಿದೆ. ಜೊತೆಗೆ ಸಿನಿ ರಸಿಕರು ಕೂಡ ಬ್ರಹ್ಮಾಸ್ತ್ರ ಸಿನಿಮಾ ಫ್ಲಾಪ್ ಎನ್ನುತ್ತಿದ್ದಾರೆ. ಹೀಗಾಗಿ ಕಂಗನಾ ಹೇಳಿಕೆಯಿಂದ ಮುಂದಿನ ದಿನಗಳಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆಯೂ ಇದೆ ಎನ್ನಲಾಗ್ತಿದೆ. ಆಂಧ್ರ ಬಾಕ್ಸ್ ಆಫೀಸ್‌ ಕಲೆಕ್ಷನ್‌ ಡಾಟ್‌ ಕಾಮ್ ಪ್ರಕಟ ಮಾಡಿರುವ ಮಾಹಿತಿ ಪ್ರಕಾರ ‘ಬ್ರಹ್ಮಾಸ್ತ್ರ ಸಿನಿಮಾಗೆ ಒಟ್ಟು 650 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಇದುವರೆಗೂ ಸಿನಿಮಾ ಘಳಿಸಿರುವುದು ಕೇವಲ 144 ಕೋಟಿ ರೂಪಾಯಿ ಕಲೆಕ್ಷನ್ ಮಾತ್ರವೇ. ಇದಕ್ಕೆ ಕಂಗನಾ ರಿಯಾಕ್ಟ್ ಮಾಡಿದ್ದಾರೆ. ‘ಬಾಲಿವುಡ್ ಚಿತ್ರರಂಗ ಕಂಡಿರುವ ಬಿಗ್ ಹಿಟ್ ಸಿನಿಮಾ ಬ್ರಹ್ಮಾಸ್ತ್ರ ಎನ್ನಲಾಗುತ್ತಿದೆ. ಅದು 650 ಕೋಟಿಯಲ್ಲಿ ಮಾಡಿರುವುದು 144 ಕೋಟಿ ಕಲೆಕ್ಷನ್. ಇಷ್ಟು ಕಲೆಕ್ಷನ್ ಮಾಡಿರುವುದು ಸುಳ್ಳು ಎನ್ನಲಾಗಿದೆ. ಇದು ಪಕ್ಕಾ ಮೂವಿ ಮಾಫಿಯಾ. ಚಿತ್ರತಂಡದವರೇ ನಿರ್ಧಾರ ಮಾಡುತ್ತದೆ ಯಾರ ಸಿನಿಮಾ ಹಿಟ್ ಆಗಬೇಕು ಯಾರದ್ದು ಫ್ಲಾಪ್ ಆಗಬೇಕು ಎಂದು. ಜನರು ನಿರ್ಧರಿಸುತ್ತಾರೆ ಯಾರಿಗೆ ಹೈಫ್ ನೀಡಬೇಕು ಯಾರನ್ನು ಬಾಯ್ಕಾಟ್ ಮಾಡಬೇಕು ಎಂದು. ಇಲ್ಲಿ ಎಲ್ಲವೂ ಎಕ್ಸಪೋಸ್ ಆಗುತ್ತಿದೆ’ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now