ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
2 ವರ್ಷಗಳ ಬಳಿಕ ಇಂಡಿಯನ್ 2 ಚಿತ್ರೀಕರಣ ಪುನರಾರಂಭ
ಕಮಲ್ ಹಾಸನ್ ರ ಇಂಡಿಯನ್ 2 ಸಿನಿಮಾ ಪೋಸ್ಟರ್ ಅನ್ನು ನಿರ್ದೇಶಕ ಶಂಕರ್ ಹಂಚಿಕೊಂಡಿದ್ದಾರೆ. ಜೊತೆಗೆ ‘ಶುಭೋದಯ ಭಾರತೀಯರೇ, ಇಂಡಿಯನ್ 2 ಸಿನಿಮಾ ಸಂಬಂಧ ಉಳಿದಿರುವ ಚಿತ್ರೀಕರಣ ಇಂದು ಪ್ರಾರಂಭವಾಗುತ್ತಿದೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ. ನಿಮ್ಮೆಲ್ಲರ ಬೆಂಬಲ ಮತ್ತು ಶುಭಾಶಯಗಳು ಬೇಕು’ ಎಂದು ಬರೆದುಕೊಂಡಿದ್ದಾರೆ.
1996ರಲ್ಲಿ ಇಂಡಿಯನ್ ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸನಲ್ಲಿ ಭಾರೀ ಗಳಿಕೆ ಮಾಡಿತ್ತು. ಆನಂತರ ಇಂಡಿಯನ್ 2 ಸಿನಿಮಾ ಮಾಡುವ ವಿಚಾರ ಬಂತು. 24 ವರ್ಷಗಳ ಬಳಿಕೆ ಇಂಡಿಯನ್ ಸಿಕ್ವೆಲ್ ಸಿನಿಮಾ ಬರುತ್ತಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ.
