• January 1, 2026

35 ವರ್ಷಗಳ ಬಳಿಕ ಮತ್ತೆ ಒಂದಾದ ಕಮಲ್ ಹಾಸನ್, ಮಣಿರತ್ನಂ

1987ರಲ್ಲಿ ತೆರೆಕಂಡ ನಾಯಗನ್ ಸಿನಿಮಾದ ಬಳಿಕ ಕಮಲ್ ಹಾಸನ್  ಹಾಗೂ ಮತ್ತು ಮಣಿರತ್ನಂ ಮತ್ತೆ ಒಂದಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಈ ಜೋಡಿಯನ್ನು ಮತ್ತೆ ಒಟ್ಟಿಗೆ ನೋಡಬೇಕು ಎಂಬ ಕನಸು ನನಸಾಗಿದೆ. ಕಮಲ್ ಹಾಗೂ ಮಣಿರತ್ನಂ ಕಾಂಬಿನೇಷನ್ ನ ನಾಯಗನ್ ಚಿತ್ರ ಬಾಕ್ಸ್ ಆಫೀಸ್ ದೂಳೆಬ್ಬಿಸಿತ್ತು. ಅಲ್ಲದೆ ಈ ಚಿತ್ರದ ನಟನೆಯ ಕಮಲ್ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇದೀಗ ಈ ಜೋಡಿಗಳು ಮತ್ತೆ ಒಂದಾಗ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಕಮಲ್ ಹಾಗೂ ಮಣಿರತ್ನಂ 35 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳ ಬಹು ದಿನಗಳ ಆಸೆ ಇಡೇರುತ್ತಿದೆ. ಮಣಿರತ್ನಂ ಮತ್ತು ಕಮಲ್ ಹಾಸನ್ ಇದೀಗ ಜೊತೆಯಾಗಿ ಕೆಲಸ ಮಾಡಲಿದ್ದು, ಈ ಸಿನಿಮಾವನ್ನು  ಉದಯನಿಧಿ  ನಿರ್ಮಾಣ ಮಾಡಲಿದ್ದು, ಎ.ಆರ್.ರೆಹಮಾನ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ. ಇದು ಕಮಲ್ ಹಾಸನ್ ಅವರ 234ನೇ ಸಿನಿಮಾವಾಗಿದ್ದು, 2024ರಲ್ಲಿ ಈ ಸಿನಿಮಾ ತೆರಿಗೆ ಬರಲಿದೆ ಎನ್ನಲಾಗುತ್ತಿದೆ. ಸದ್ಯ ಕಮಲ್ ಏಜೆಂಟ್ ವಿಕ್ರಮ್ ಸಿನಿಮಾದ ಮೂಲಕ ಮತ್ತೆ ಅಬ್ಬರಿಸಿದ್ದಾರೆ. ಇತ್ತ ಮಣಿರತ್ನಂ ಕೂಡ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಮೂಲಕ ಮತ್ತೊಂದು ಹಿಟ್ ಸಕ್ಸಸ್ ಕಂಡಿದ್ದು ಇದೀಗ ಈ ಇಬ್ಬರು ಒಂದಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now