• January 1, 2026

ನಟ ಕಮಾಲ್ ಆರ್ ಖಾನ್ ಗೆ ಎದೆನೋವು: ಬಂಧನದ ಬಳಿಕ ಹೆಚ್ಚಿತು ಮತ್ತಷ್ಟು ಸಂಕಷ್ಟ

ಒಂದಲ್ಲ ಒಂದು ವಿವಾದಗಳಿಂದಲೇ ಬಿಟೌನ್ ನಲ್ಲಿ ಕುಖ್ಯಾತಿ ಘಳಿಸಿರುವ ನಟ ಕಂ ಸ್ವಯಂ ವಿಮರ್ಶಕ ಕಮಾಲ್ ಆರ್ ಖಾನ್ ಸದ್ಯ ಪೊಲೀಸರ ಬಂಧನದಲ್ಲಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಕಾರಣಕ್ಕೆ ಮುಂಬೈ ಪೊಲೀಸರು ಕಮಾಲ್ ಖಾನ್ ರನ್ನು ಬಂಧಿಸಿದ್ದಾರೆ. ದುಬೈಗೆ ತೆರಳಿದ್ದ ಕಮಾಲ್ ಖಾನ್ ರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಮಧ್ಯೆ  ಕಮಾಲ್ ಖಾನ್ ಗೆ ಎದೆ ನೋವು ಕಾಣಿಸಿಕೊಂಡಿದೆ. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಮಾಲ್ ಖಾನ್ ರನ್ನು ಮುಂಬೈನ ಶತಾಬ್ದಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ವಿವಾದಾತ್ಮಕ ಟ್ವೀಟ್​ ಮತ್ತು ವಿಡಿಯೋಗಳ ಮೂಲಕ ಕಮಾಲ್​ ಆರ್​. ಖಾನ್ ಪ್ರತಿಭಾರಿಯೂ​ ಕಿರಿಕ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಕಮೆಂಟ್​ಗಳನ್ನು ಮಾಡಿದ್ದಕ್ಕಾಗಿ ಕಮಾಲ್ ಆರ್ ಖಾನ್  ವಿರುದ್ಧ ದೂರು ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಮುಂಬೈ ಪೊಲೀಸರಿಗೆ ತಿಳಿಸಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now