• January 1, 2026

‘ಜೊತೆ ಜೊತೆಯಲಿ’ ಧಾರವಾಹಿ ತಂಡದಲ್ಲಿ ಮನಸ್ತಾಪ: ಸೀರಿಯಲ್ ನಿಂದ ಹೊರ ಹೋಗ್ತಾರಾ ಅನಿರುದ್ಧ್?

ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿಗಳಲ್ಲೊಂದು ಝಿ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ. ಧಾರವಾಹಿಯಲ್ಲಿ ನಟ ಅನಿರುದ್ಧ್ ಆರ್ಯವರ್ಧನ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು ವೀಕ್ಷಕರಿಂದ ಈ ಧಾರವಾಹಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ರೆ ಇದೀಗ ಧಾರವಾಹಿ ತಂಡದಲ್ಲಿ ಕಿರಿಕ್ ಶುರುವಾಗಿದ್ದು ನಟ ಅನಿರುದ್ಧ್ ಜೊತೆ ತಂತ್ರಜ್ಞರ ತಂಡ ಮುನಿಸಿಕೊಂಡಿದೆ ಎನ್ನಲಾಗುತ್ತಿದೆ. ಈ ಹಿಂದೆ ಧಾರವಾಹಿಯ ನಟಿ ಮೇಘಾ ಶೆಟ್ಟಿ ತಂಡದ ಜೊತೆ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಅವರು ಧಾರವಾಹಿಯಿಂದ ಹೊರ ನಡೆಯಲಿದ್ದು ಆ ಜಾಗಕ್ಕೆ ಮತ್ತೊಬ್ಬ ನಟಿ ಎಂಟ್ರಿಕೊಡ್ತಾರೆ ಎಂಬ ಸುದ್ದಿಯು ಹರಿದಾಡಿತ್ತು,. ಬಳಿಕ ಮೇಘಾ ಶೆಟ್ಟಿ ಸ್ಪಷ್ಟನೆ ನೀಡಿ ಧಾರವಾಹಿಯಲ್ಲಿ ಸಕ್ರಿಯರಾದರು. ಇದೀಗ ಜೊತೆ ಜೊತೆಯಲಿ ತಂಡದ ಜೊತೆ ನಟ ಅನಿರುದ್ಧ್ ಮುನಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಸೀರಿಯಲ್​ ಸೆಟ್​ನಲ್ಲಿ ಅನಿರುದ್ಧ್​ ಅವರು ಅಸಹಕಾರ ತೋರಿದ್ದಾರೆ ಎನ್ನಲಾಗುತ್ತಿದೆ. 150 ಸಂಚಿಕೆಗಳು ಪೂರ್ಣಗೊಂಡ ಬಳಿಕ ಈ ರೀತಿ ವರ್ತನೆ ಮರುಕಳಿಸಲು ಶುರುವಾಗಿದೆ. ಇದೀಗ ಅವರ ಅಸಹಕಾರ ಮಿತಿ ಮೀರಿದ್ದು ಅವರನ್ನು ಬ್ಯಾನ್ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅನಿರುದ್ ಕಡೆಯಿಂದಾಗಲಿ ಧಾರವಾಹಿ ತಂಡದ ಕಡೆಯಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನಿರುದ್ಧ್​ ಮಾಡುತ್ತಿರುವ ಆರ್ಯವರ್ಧನ್​ ಪಾತ್ರ ಸಾಕಷ್ಟು ಫೇಮಸ್​ ಆಗಿದೆ. ಆ ಜಾಗದಲ್ಲಿ ಬೇರೆ ನಟನನ್ನು ಕಲ್ಪಿಸಿಕೊಳ್ಳಲು ಪ್ರೇಕ್ಷಕರು ಸಿದ್ಧರಿಲ್ಲ. ಒಂದು ವೇಳೆ ಅನಿರುದ್ಧ್​ ಈ ಸೀರಿಯಲ್​ನಿಂದ ಹೊರನಡೆದರೆ ಮುಂದೇನು ಎಂಬ ಪ್ರಶ್ನೆ ಶುರುವಾಗಿದೆ. ವಿಭಿನ್ನ ಪ್ರೇಮ ಕಥೆ ಹೊಂದಿರುವ ‘ಜೊತೆ ಜೊತೆಯಲಿ’ ದಾರವಾಹಿಯಲ್ಲಿ ಅನಿರುದ್ಧ್​ ಮತ್ತು ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಒಂದಷ್ಟು ಎಪಿಸೋಡ್​ಗಳ ಚಿತ್ರೀಕರಣ ಆಗಿದೆ. ವಿವಾದ ಬಗೆಹರಿಯುವವರೆಗೆ ಆ ಸಂಚಿಕೆಗಳು ಪ್ರಸಾರ ಆಗುತ್ತವೆ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now