ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮತ್ತೆ ಹೀರೋ ಆಗಿ ಮಿಂಚಲು ರೆಡಿಯಾದ ಜೋಗಿ ಪ್ರೇಮ್
ಈ ಭಾರಿ ಪ್ರೇಮ್ ನಿರ್ದೇಶನದ ಸಿನಿಮಾಗೆ ಹೊಸ ನಿರ್ದೇಶಕ ಎಂ ಶಶಿಧರ್ ಆಕ್ಷನ್ ಕಟ್ ಹೇಳಿದ್ದು ಈ ಸಿನಿಮಾ ಸಖತ್ ಡಿಫರೆಂಟ್ ಆಗಿರಲಿದೆಯಂತೆ. ಶಶಧರ್ ಈಗಾಗಲೇ ಅರುಣ್ ರಾಮ್‌ಪ್ರಸಾದ್ ನಾಯಕರಾಗಿರುವ ‘ಘಾರ್ಗಾ’ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಪ್ರೇಮ್ ಸಿನಿಮಾ ಇವರಿಗೆ ಎರಡನೇ ಸಿನಿಮಾವಾಗಿದೆ.
ಮೂಲತಃ ಮೈಸೂರಿನವರಾದ ಶಶಿಧರ್ ಫಿಲ್ಮ್ ಮೇಕಿಂಗ್ ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾಗೆ ಬಂಡವಾಳ ಹೂಡಿದ್ದ ಎ2 ಫಿಲ್ಮ್ ಈ ಸಿನಿಮಾಗೂ ಬಂಡವಾಳ ಹೂಡಲಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗಲಿದ್ದು, ಇನ್ನಷ್ಟೇ ಶೀರ್ಷಿಕೆ ರಿವೀಲ್ ಆಗಬೇಕಿದೆ.
