• June 20, 2026

ನಟಿ ಜಿಯಾ ಖಾನ್ ಸಾವು: ಮರು ತನಿಖೆಗೆ ನಿರಾಕರಿಸಿದ ಹೈಕೋರ್ಟ್

ಬಾಲಿವುಡ್ ನಟಿ ಜಿಯಾ ಖಾನ್ ನಿಧನರಾಗಿ 9 ವರ್ಷ ಕಳೆದಿದೆ. ಆದರೆ ಇಂದಿಗೂ ಆಕೆಯ ಸಾವು ನಿಗೂಡವಾಗಿಯೇ ಉಳಿದಿದೆ. 2013ರ ಜೂನ್ 3ರಂದು ಜಿಯಾ ಶವ ಮುಂಬೈನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗಳ ಸಾವಿನ ಪ್ರಕರಣವನ್ನು ಮರು ತನಿಖೆ ಮಾಡುವಂತೆ ರಬಿಯಾ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾ ಗೊಳಿಸಿದೆ. ಮಗಳ ಮೃತಪಟ್ಟ ದಿನದಿಂದಲೂ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಜಿಯಾ ಖಾನ್ ತಾಯಿ ರಬಿಯಾ ಖಾನ್ ಆರೋಪ ಮಾಡುತ್ತಲೇ ಬಂದಿದ್ದಾರೆ.  ಜಿಯಾಳನ್ನು ಆಕೆಯ ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿ ಕೊಲೆ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣವನ್ನು ರಿ-ಓಪನ್ ಮಾಡುವಂತೆ ರಬಿಯಾ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ನಿರಾಕರಿಸಿದೆ. ಜಿಯಾ ಪ್ರಕರಣವ್ನು ಸಿಬಿಐ ತನಿಖೆ ನಡೆಸಿ ಆತ್ಮಹತ್ಯೆ ಎಂದು ವರದಿ ನೀಡಿತ್ತು. ಆದರೆ ಸಿಬಿಐ ‘ತನಿಖಾ ವರದಿಯಲ್ಲಿ ತಪ್ಪಿದೆ. ಈ ಪ್ರಕರಣವನ್ನು ಮರು ವಿಚಾರಣೆ ನಡೆಸಬೇಕು. ಮಗಳ ಸಾವಿಗೆ ನ್ಯಾಯ ಸಿಗಬೇಕು’ ಎಂದು ರಬಿಯಾ ಬಾಂಬೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಜೊತೆಗೆ ಅಮೆರಿಕದ ಎಫ್​ಬಿಐ ಸಹಾಯದೊಂದಿಗೆ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ‘ನಮಗೆ ಸಿಬಿಐ ತನಿಖೆ ಮೇಲೆ ಸಂಪೂರ್ಣ ನಂಬಿಕೆ ಇದೆ. ಈ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡುವ ಮೂಲಕ ರಬಿಯಾ ಅವರು ಪ್ರಕರಣವನ್ನು ಮತ್ತಷ್ಟು ದುರ್ಬಲ ಮಾಡುತ್ತಿದ್ದಾರೆ’ ಎಂದು ನ್ಯಾಯಮೂರ್ತಿಗಳಾದ ಎಎಸ್​ ಗಡ್ಕರಿ ಹಾಗೂ ಎಂಎನ್ ಜಾಧವ್ ಹೇಳಿದ್ದಾರೆ. ಹೀಗಾಗಿ ರಬಿಯಾ ಸಲ್ಲಿಸಿದ್ದ ವರದಿಯನ್ನು ವಜಾ ಗೊಳಿಸಲಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now