• January 1, 2026

‘ಲವ್ ಲಿ’ ಎಂದು ವಸಿಷ್ಠ ಸಿಂಹಗಾಗಿ ಜಾರ್ಖಂಡ್ ನಿಂದ ಬಂದ ಹುಡುಗಿ

ತಮ್ಮ ಕಂಚಿನ ಕಂಠದಿಂದಲೇ ಸಖತ್ ಖ್ಯಾತಿ ಗಳಿಸಿರುವ ನಟ ವಸಿಷ್ಠ ಸಿಂಹ ತೆಲುಗು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಖಳನಟನಾಗಿಯೇ ಗಾಂಧಿನಗರದಲ್ಲಿ ಹೆಚ್ಚಾಗಿ ಅಬ್ಬರಿಸಿದ್ದ ವಸಿಷ್ಠ ಸಿಂಹ ರೊಮ್ಯಾಂಟಿಕ್ ಆಗಿ ಪ್ರೇಮ ಗೀತೆ ಹಾಡೋಕೆ ರೆಡಿಯಾಗಿದ್ದಾರೆ. ಈ ಮಧ್ಯೆ ವಸಿಷ್ಠ ಸಿಂಹಗೆ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಟಿಯ ಎಂಟ್ರಿಯಾಗ್ತಿದೆ. ‘ಕಾಲ ಚಕ್ರ’, ‘ತಲ್ವಾರ್‌ ಪೇಟೆ’ ಸಿನಿಮಾಗಳ ಬಳಿಕ ವಸಿಷ್ಠ ಕನ್ನಡದಲ್ಲಿ ಲವ್ ಲಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು ಈಗಾಗ್ಲೆ ಫಸ್ಟ್ ಲುಕ್ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಸಕ್ಸಸ್ ಅಗಿದ್ದಾರೆ. ಇಷ್ಟು ದಿನಗಳ ಕಾಲ ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದ ವಸಿಷ್ಠ ಸಿಂಹ ಲವ್ ಲಿ ಸಿನಿಮಾದಲ್ಲಿ ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಳ್ತಿದ್ದು ಚೇತನ್ ಕೇಶವ್ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಲವ್ ಲಿ ಚಿತ್ರದಲ್ಲಿ ವಸಿಷ್ಠ ಸಿಂಹಗೆ ಜೋಡಿಯಾಗಿ ಯಾರು ನಟಿಸ್ತಾರೆ ಅನ್ನೋ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಹಿಂದಿ, ಕೊರಿಯನ್, ತಮಿಳು ಸಿನಿಮಾ ಹಾಗೂ ವೆಬ್ ಸಿರೀಸ್ ಗಳಲ್ಲಿ ನಟಿಸಿರುವ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ವಸಿಷ್ಠಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಈಗಾಗ್ಲೆ ಸ್ಟೆಫಿ ಲವ್ ಲಿ ಟೀಂಗೆ ಎಂಟ್ರಿಕೊಟ್ಟಿದ್ದು ಇಂದಿನಿಂದ ಚಿತ್ರದ ಎರಡನೇ ಹಂತದ ಶೂಟಿಂಗ್ ಶುರುವಾಗಲಿದೆ. ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಜೊತೆ ಚೇತನ್ ಕೇಶವ್ ಕೆಲಸ ಮಾಡಿದ್ದು ಕಳೆದ ಏಳೆಂಟು ವರ್ಷಗಳಿಂದ ವಸಿಷ್ಠ ಸಿಂಹ ಜೊತೆಯಲ್ಲಿದ್ದಾರೆ. ವಸಿಷ್ಠ ಅವರಿಗಾಗಿಯೇ ಡಿಫರೆಂಟ್ ಕಥೆ ರೆಡಿಮಾಡಿ ಸಿನಿಮಾ ಮಾಡ್ತಿರುವ ಚೇತನ್ ಜುಲೈ 21ರಂದು ವಸಿಷ್ಠ ಸಿಂಹ ಹಾಗೂ ಸ್ಟೆಫಿ ಪಟೇಲ್ ಕಾಂಬಿನೇಷನ್ ನ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now