• March 15, 2026

ಮದುವೆಯಾದ ವ್ಯಕ್ತಿಯ ಜೊತೆ ರಿಲೇಶನ್ ಶಿಪ್ ನಲ್ಲಿದ್ದೆ: ಜಯಶ್ರೀ ಆರಾಧ್ಯ

ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಸ್ಪರ್ಧಿಗಳ ಒಬ್ಬೊಬ್ಬರ ಲೈಫ್ ಒಂದೊಂದು ಥರ. ಅತ್ತ ನಟಿ ಸಾನ್ಯಾ ಅಯ್ಯರ್ ತಂದೆಯಿಂದಲೇ ಮೋಸ ಹೋಗಿದ್ದರೆ ಇತ್ತ ಅರ್ಜುನ್ ರಮೇಶ್ ತಾನು ಎಷ್ಟು ಜನರ ಜೊತೆ ಫ್ಲರ್ಟ್ ಮಾಡಿದ್ದೇನೆ ಎಂದೇ ಗೊತ್ತಿಲ್ಲ ಎಂದಿದ್ದಾರೆ. ಇದೀಗ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಆರಾಧ್ಯ ತಾವು ಮದುವೆಯಾದ ವ್ಯಕ್ತಿಯಜೊತೆ ರಿಲೇಷನ್ ಶಿಪ್ ನಲ್ಲಿದ್ದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕಂಟೆಸ್ಟೆಂಟ್ ಗಳಿಗೆ ನಾನು ಯಾರು ಎಂಬ ಟಾಸ್ಕ್ ನೀಡಿದೆ. ಇದರ ಅನುಸಾರ ಸ್ಪರ್ಧಿಗಳು ತಮ್ಮ ಜೀವನದ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.ಈ ವೇಳೆ ಮಾರಿಮುತ್ತು ಮೊಮ್ಮಗಳು ಜಯಶ್ರೀ ತಮ್ಮ ಜೀವನದ ಕಹಿ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ. ಜಯಶ್ರೀ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿಕೊಳ್ಳುವುದರ ಜೊತೆಗೆ ಉದ್ಯಮದಲ್ಲೂ ತೊಡಗಿಕೊಂಡಿದ್ದು, ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಅಂದ ಹಾಗೆ ಜಯಶ್ರೀ ಮದುವೆಯಾದ ವ್ಯಕ್ತಿಯ ಜೊತೆ ಸಂಬಂಧ ಇರಿಸಿಕೊಂಡಿದ್ದು ಆ ವ್ಯಕ್ತಿಯಿಂದ ಜೂಜು ಕಲಿತಿದ್ದಾಗಿ ಹೇಳಿಕೊಂಡಿದ್ದಾರೆ. ‘ವಿವಾಹಿತ ವ್ಯಕ್ತಿಯ ಜತೆ ನಾನು ಎರಡು ವರ್ಷ ರಿಲೇಶನ್​ಶಿಪ್​ನಲ್ಲಿದ್ದೆ. ನಾನು ದುಡ್ಡಿಗೋಸ್ಕರ ಅವರ ಜತೆ ಇರಲಿಲ್ಲ. ಅವರಿಗೆ ನನ್ನ ಬೆಂಬಲ ಬೇಕಿತ್ತು, ನನಗೆ ಅವರ ಬೆಂಬಲ ಬೇಕಿತ್ತು. ಅದಕ್ಕಾಗಿ ಅವರ ಜತೆ ರಿಲೇಶನ್​ಶಿಪ್​ನಲ್ಲಿದ್ದೆ’ ಎಂದು ಹೇಳಿಕೊಂಡಿದ್ದಾರೆ. ‘ನಾನು ಆ ವ್ಯಕ್ತಿಯಿಂದ ಜೂಜು ಕಲಿತೆ. ಒಂದೂವರೆ ವರ್ಷಗಳ ಕಾಲ ಜೂಜು ಆಡಿದ್ದು ಆ ಬಳಿಕ ಅದರ ಮೇಲೆ ಅಸಹ್ಯ ಉಂಟಾಗಿ ಜೂಜು ಬಿಟ್ಟೆ. ನನ್ನ ಮೇಲೆ ನನಗೆ ಅಸಹ್ಯ ಹುಟ್ಟಿತು. ಅವರಿಗೆ ಕ್ಯಾನ್ಸರ್ ಬಂತು. ಆದರೂ ನಾನು ಅವರನ್ನು ಬಿಡಲಿಲ್ಲ. ನಂತರ ನಾನು ಬಿಸ್ನೆಸ್ ಶುರು ಮಾಡಿದೆ. ಅವರು ತುಂಬಾನೇ ಕಷ್ಟದಲ್ಲಿದ್ದ ಕಾರಣ ನಾನು ಆ ವ್ಯಕ್ತಿಯನ್ನು ಬಿಡಲಿಲ್ಲ ಎಂದು ಜಯಶ್ರೀ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now