• March 16, 2026

ಬಿಗ್ ಬಾಸ್ ಮನೆಯಿಂದ ಹೊರ ಹೋದ ತಕ್ಷಣವೇ ರಿಜಿಸ್ಟರ್ ಮ್ಯಾರೇಜ್ ಆಗಲು ಜಯಶ್ರೀ ನಿರ್ಧಾರ

ಕನ್ನಡದ ಬಿಗ್ ಬಾಸ್ ಓಟಿಟಿ ಆರಂಭವಾಗಿ ಮೂರು ನಾಲ್ಕು ವಾರಗಳೇ ಕಳೆದಿದೆ. ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ದೊಡ್ಮನೆಯಿಂದ ಈಗಾಗಲೇ ಮೂವರು ಹೊರ ಹೋಗಿದ್ದಾರೆ. ಈ ವಾರ ಯಾರು ಹೊರ ಹೋಗುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯಿಂದ ಹೊರ ಹೋದ ಬಳಿಕ ತಾವು ಮಾಡುವ ಮೊದಲ ಕೆಲಸ ಏನು ಎಂಬುದನ್ನು ನಟಿ ಹಾಗೂ ಮಾಡೆಲ್ ಜಯಶ್ರೀ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಆರಂಭದಲ್ಲೇ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದರು. ಮದುವೆಯಾದ ವ್ಯಕ್ತಿಯೊಂದಿಗಿದ್ದ ಸಂಬಂಧ, ಬಾಯ್ ಫ್ರೆಂಡ್ ನಿಂದ ಆದ ಮೋಸ, ಹುಡುಗಿಯಿಂದ ಆದ ನೋವು, ಎರಡೆರಡು ಪತ್ನಿಯರು, ಡಿವೋರ್ಸ್ ತೆಗೆದುಕೊಂಡಿರುವ ಹೀಗಿ ಸಾಕಷ್ಟು ನೋವುಗಳನ್ನು ತೋಡಿಕೊಂಡಿದ್ದರು. ನಟಿ, ಜಯಶ್ರೀ ಆರಾಧ್ಯ ತಾವು ಮದುವೆ ಆಗಿರುವ ಹುಡುಗನ ಜೊತೆ ಅಫೇರ್ ಇಟ್ಟುಕೊಂಡಿದ್ದ ವಿಷಯವನ್ನು ಎಲ್ಲರ ಎದುರು ಹಂಚಿಕೊಂಡಿದ್ದರು. ಆತನಿಂದ ದೂರವಾಗಿರೋ ಜಯಶ್ರೀ ಇದೀಗ ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ ಹೇಳಿದ್ದರು. ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣವೇ ಆತನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗೋದಾಗಿ ಸಹ ಸ್ಪರ್ಧಿಗಳ ಜೊತೆ ಆರಾಧ್ಯ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋದರೆ ಜಯಶ್ರೀ ಬದಲಾಗ ಬಹುದು ಎಂಬ ಕಾರಣಕ್ಕೆ ಮೊದಲೇ ಮದುವೆಯಾಗುವಂತೆ ಜಯಶ್ರೀ ಅವರನ್ನು ಆಕೆಯ ಪ್ರಿಯಕರ ಕೇಳಿಕೊಂಡಿದ್ದರಂತೆ. ನಾನು ಬದಲಾಗಿಲ್ಲ. ಮನೆಯಿಂದ ಹೊರ ಹೋದ ತಕ್ಷಣವೇ ಪ್ರೀತಿಸಿದ ಹುಡುಗನ ಜೊತೆ ಹಸೆಮಣೆ ಏರುವುದಾಗಿ ಜಯಶ್ರೀ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now