ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಜೂನಿಯರ್’ ಆದ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ: ಕೊನೆಗೂ ರಿವೀಲ್ ಆಯ್ತು ಮೊದಲ ಸಿನಿಮಾದ ಟೈಟಲ್
ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಈ ಸಿನಿಮಾಗೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಬಂಡವಾಳ ಹೂಡಿದೆ. ಇದು ವಾರಾಹಿ ಸಂಸ್ಥೆಯ 15ನೇ ಸಿನಿಮಾವಾಗಿದ್ದು ಸಾಕಷ್ಟು ಅದ್ದೂರಿಯಾಗಿ ಸಿನಿಮಾ ರೆಡಿಯಾಗುತ್ತಿದೆ. ಕನ್ನಡ ಜೊತೆಗೆ ತೆಲುಗಿನಲ್ಲೂ ಈ ಸಿನಿಮಾ ನಿರ್ಮಾಣವಾಗಿದ್ದು ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಕಿರೀಟಿ ಸಿನಿಮಾದ ಮೂಲಕ ಸಾಕಷ್ಟು ವರ್ಷಗಳ ಬಳಿಕ ನಟಿ ಜೆನಿಲಿಯಾ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಕಿರೀಟಿಗೆ ಸಾಥ್ ನೀಡಿದ್ದಾರೆ. ಮೊದಲ ಸಿನಿಮಾದಲ್ಲೇ ಸಾಕಷ್ಟು ಭರವಸೆ ಮೂಡಿಸಿರೋ ಕಿರೀಟಿ ನಟನೆಯ ಜೂನಿಯರ್ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಕಾರಣದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಿರೀಟಿ ಗುರುತಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಭಾಷೆಗಳಿಗೂ ಸೂಟ್ ಆಗುವ ಟೈಟಲ್ ಅನ್ನೇ ಚಿತ್ರತಂಡ ಸೆಲೆಕ್ಟ್ ಮಾಡಿದ್ದು ಜೂನಿಯರ್ ಟೈಟಲ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
