ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಜೈಲರ್ ಲುಕ್ ನಲ್ಲಿ ರಜನಿಕಾಂತ್: ಫೋಸ್ಟರ್ ನೋಡಿ ಕ್ಲೀನ್ ಬೋಲ್ಡ್ ಆದ ಅಭಿಮಾನಿಗಳು
ಈಗಾಗ್ಲೆ ಸಾಕಷ್ಟು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ರಜನಿಕಾಂತ್ ಇದೀಗ ಜೈಲರ್ ಸಿನಿಮಾದಲ್ಲಿ ನಿಭಾಯಿಸುತ್ತಿರುವ ಪಾತ್ರದ ಬಗ್ಗೆ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಜೊತೆಗೆ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಳ್ತಿದ್ದು ಸದ್ಯದಲ್ಲೇ ಅವರ ಲುಕ್ ಕೂಡ ಬಿಡುಗಡೆ ಆಗಲಿದೆ. ಹೀಗಾಗಿ ಹ್ಯಾಟ್ರಿಕ್ ಹೀರೋ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯ್ತಿದ್ದಾರೆ.
ಇದೇ ಮೊದಲ ಬಾರಿಗೆ ರಜನಿಕಾಂತ್ ಮತ್ತು ಶಿವರಾಜ್ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಸಖತ್ ಹೈಪ್ ಸೃಷ್ಟಿ ಆಗಿದೆ. ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಎದುರು ಶಿವಣ್ಣ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ.
#Jailer begins his action Today!@rajinikanth @Nelsondilpkumar @anirudhofficial pic.twitter.com/6eTq1YKPPA
— Sun Pictures (@sunpictures) August 22, 2022
