ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್ ಫರ್ನಾಂಡೀಸ್ ಆರೋಪಿ
ಜೈಲಿನಲ್ಲಿರುವ ಉದ್ಯಮಿ ಖೈದಿಯನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿ ಉದ್ಯಮಿ ಪತ್ನಿಯನ್ನು ನಂಬಿಸಿ ವಂಚಕ ಸುಕೇಶ್ ಚಂದ್ರಶೇಖರ್ ಬರೋಬ್ಬರಿ 215 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದ. ಬಳಿಕ ಉದ್ಯಮಿ ಪತ್ನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದ್ದು ಈ ಬಗ್ಗೆ ಪೊಲೀಸರಿಗೆ ದೂರ ನೀಡಿದ್ದರು.
ಸುಕೇಶ್ ವಂಚಿಸಿದ್ದ 215 ಕೋಟಿ ರೂಪಾಯಿ ಹಣದಲ್ಲಿ ಹತ್ತು ಕೋಟಿ ರೂಪಾಯಿ ಹಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಗಿಫ್ಟ್ ನೀಡಿದ್ದ. ಲಕ್ಸುರಿ ಬಿಎಂಡಬ್ಲ್ಯು ಕಾರ್, ಡೈಮೆಂಡ್ ಬ್ರಾಸಲೆಟ್, ಫ್ರಾಂಕ್ ಮುಲ್ಲರ್ ಲಕ್ಸುರಿ ವಾಚ್, ದುಬಾರಿ ಬೆಲೆಬಾಳುವ ಗುಸ್ಸಿ, ಚಾನಲ್‌ಬ್ಯಾಗ್‌ಗಳ ಜೊತೆಗೆ ಕುದುರೆಯೊಂದನ್ನು ಗಿಫ್ಟ್ ಆಗಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಖೇಶ್ ನೀಡಿದ್ದ.
ವಂಚನೆ ಪ್ರಕರಣದಲ್ಲಿ ರಿ ನಿರ್ದೇಶನಾಲಯ ಜಾಕ್ವೆಲಿನ್ ಫರ್ನಾಂಡೀಸ್ ರನ್ನು ಕೂಡ ಆರೋಪಿಯನ್ನಾಗಿಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಿದೆ. ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಕೇಶ್ ಚಂದ್ರಶೇಖರ್ ವಂಚನೆ ಮಾಡಿ ಹಣ ಗಳಿಸಿದ್ದಾನೆ ಎಂಬುದು ಗೊತ್ತಿತ್ತು ಎಂದು ಇ.ಡಿ. ಹೇಳಿದೆ. ಇದರಿಂದ ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಆರೋಪಿಯನ್ನಾಗಿ ಮಾಡಲು ಇ.ಡಿ. ಮುಂದಾಗಿದೆ.
