• February 10, 2026

ನೂಪುರ್ ಶರ್ಮಾ ಹತ್ಯೆಗೆ ಸಂಚು ರೂಪಿಸಿದ್ದ ರಷ್ಯಾದಲ್ಲಿ ಸೆರೆಸಿಕ್ಕ ಉಗ್ರನಿಗೆ ಐಸಿಎಸ್ ತರಬೇತಿ

ಮಾಸ್ಕೋ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ನಿನ್ನೆ ರಷ್ಯಾದಲ್ಲಿ ಸೆರೆ ಸಿಕ್ಕ ಐಸಿಎಸ್ ಉಗ್ರ ಅಜಮೋವ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರ ಹಾಕಿದ್ದು ನೂಪುರ್ ಶರ್ಮಾರನ್ನು ಕೊಲ್ಲುವ ಯೋಜನೆ ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯ ಏಷ್ಯದವನಾಗಿರುವ ಆತ್ಮಾಹುತಿ ಬಾಂಬರ್ ಅಜಮೊವ್ ಇಸ್ಲಾಮಿಕ್ ಸ್ಟೇಟ್​​ನ ಮುಖಂಡನಿಗೆ ನಿಷ್ಠನಾಗಿರುವುದಾಗಿ  ಪ್ರತಿಜ್ಞೆ ತೆಗೆದುಕೊಂಡಿದ್ದ. ಬಳಿಕ ಈತನನ್ನು ರಷ್ಯಾಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅಗತ್ಯ ದಾಖಲೆ ಸಮೇತ ಭಾರತದಲ್ಲಿ ದೊಡ್ಡ ಮಟ್ಟದ ಉಗ್ರ ಕೃತ್ಯ ನಡೆಸುವುದಕ್ಕಾಗಿ ಭಾರತಕ್ಕೆ ಬರಲು ಮುಂದಾಗಿದ್ದ ಎಂದು ಎಫ್ಎಸ್​​ಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿತ್ತು. ರಷ್ಯಾದಲ್ಲಿ ಬಂಧಿತನಾಗಿರುವ ಆತ್ಮಾಹುತಿ ದಾಳಿ ಮೂಲಕ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ಅವರನ್ನು ಕೊಲ್ಲುವ ಯೋಜನೆಯನ್ನು ಮಾಡಿಕೊಂಡಿದ್ದ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದೆ. 1992ರಲ್ಲಿ ಜನಿಸಿದ ಅಜಮೊವ್ ಟರ್ಕಿಯಲ್ಲಿ ಐಎಸ್‍ನಿಂದ ನೇಮಕಗೊಂಡು ತರಬೇತಿ ಪಡೆದಿದ್ದ. ಪ್ರವಾದಿ ಮೊಹಮ್ಮದ್ ಕುರಿತು ಅವಹೇಳಕನಾಗಿ ಹೇಳಿಕೆ ನೀಡಿರುವ ಕಾರಣಕ್ಕೆ ಅವರನ್ನು ಹತ್ಯೆಗೈದು ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದ್ದೆ ಎಂದು ವಿಚಾರಣೆ ವೇಳೆ ಅಜಮೋವ್ ಹೇಳಿರುವುದಾಗಿ  ಮೂಲಗಳು ತಿಳಿಸಿವೆ. ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸ್ಕೆಚ್ ಹಾಕಿದ್ದು ಬಿಜೆಪಿ ನಾಯಕರು ನಮ್ಮ ಟಾರ್ಗೆಟ್ ಎಂದು ಒಪ್ಪಿಕೊಂಡಿದ್ದಾನೆ. ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲೆಂದು ಈ ಶಂಕಿತ ಉಗ್ರನನ್ನು ಐಸಿಸ್ ನೇಮಕ ಮಾಡಿಕೊಂಡಿದೆ. ಈ ಉಗ್ರ ಭಾರತ ಪ್ರವೇಶ ಮಾಡುವ ಬಗ್ಗೆ ತಯಾರಿ ಆರಂಭಿಸಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now