ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮ್ಯೂಸಿಕಲ್ ಲವ್ ಸ್ಟೋರಿ ರೇಮೋ ಬಿಡುಗಡೆ ದಿನಾಂಕ ನಿಗದಿ
ಸದ್ಯದಲ್ಲೇ ಲಿರಿಕಲ್ ಸಾಂಗ್, ಒಂದು ವಿಡಿಯೋ ಸಾಂಗ್ ಹಾಗೂ ಟ್ರೇಲರ್ ರಿಲೀಸ್ ಮಾಡಲು ರೇಮೋ ತಂಡ ಮುಂದಾಗಿದೆ. “ರೇಮೊ” ಚಿತ್ರದಲ್ಲಿ ಪರಿಶುದ್ಧ ಪ್ರೇಮಕಥೆಯೊಂದಿಗೆ ಭಾವನಾತ್ಮಕ ಸನ್ನಿವೇಶಗಳು ನೋಡುಗರ ಮನಸ್ಸಿಗೆ ಹತ್ತಿರವಾಗಲಿದ್ದು, ನವೆಂಬರ್ 25 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರೇಮೋ ಸಿನಿಮಾ ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಒಂದಕ್ಕಿಂತ ಒಂದು ಅದ್ಭುತವಾಗಿ ಮೂಡಿ ಬಂದಿದೆ. ಇದೇ ಮೊದಲ ಬಾರಿಗೆ ಆಶಿತಾ ಹಾಗೂ ಇಶಾನ್ ತೆರೆ ಮೇಲೆ ಒಂದಾಗುತ್ತಿದ್ದು ಇಬ್ಬರ ಮುದ್ದು ಜೋಡಿಯನ್ನು ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ.
