ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೋಟಿ ಖರ್ಚಾದರೂ ಪರವಾಗಿಲ್ಲ, ನಾನಿದ್ದೀನಿ: ಹರೀಶ್ ರಾಯ್ ಚಿಕಿತ್ಸೆಗೆ ಭರವಸೆ ನೀಡಿದ ಸ್ಯಾಂಡಲ್ ವುಡ್ ಸ್ಟಾರ್ ನಟ
ಹರೀಶ್ ಗೆ ಕ್ಯಾನ್ಸರ್ ಇರುವ ವಿಷಯ ತಿಳಿದು ಸಿನಿಮಾ ರಂಗದ ಸಾಕಷ್ಟು ಮಂದಿ ಕರೆ ಮಾಡಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೆ ಅವರಿಗೆ ಬಂದಿರುವ ವಿಶೇಷ ಕರೆಯ ಬಗ್ಗೆ ಮಾತನಾಡಿರುವ ಹರೀಶ್ ರಾಯ್, “ಅಂದು ರಾತ್ರಿ 12 ಗಂಟೆಗೆ ಒಂದು ಕರೆ ಬಂತು. ಅವರು ಕನ್ನಡದ ದೊಡ್ಡ ನಟ, ದೊಡ್ಡ ಹೆಸರು ಮಾಡಿದವರು. ನಾವಿದ್ದೀವಲ್ಲಾ, ಒಂದು ಮಾತು ಹೇಳಬಹುದಿತ್ತಲ್ಲ. ನನ್ನ ಪರ್ಸನ್ ನಂಬರ್ ನಿಮಗೆ ಕೊಟ್ಟಿದ್ದೇನೆ. ನೀವು ಕರೆ ಮಾಡಿ ಮಾತಾಡಿ. ಚಿಕಿತ್ಸೆಗೆ ಕೋಟಿ ಖರ್ಚಾದರೂ ಪರ್ವಾಗಿಲ್ಲ, ನಾನು ನೋಡಿಕೊಳ್ಳುತ್ತೇನೆ. ಆದರೆ ಈ ವಿಚಾರ ಎಲ್ಲೂ ಹೇಳಬೇಡಿ” ಎಂದು ಭರವಸೆ ಕೊಟ್ಟಿದ್ದಾರೆ ಎಂದು ಹರೀಶ್ ಹೇಳಿದ್ದಾರೆ.
ಆದರೆ ಆ ನಟ ಯಾರು ಅನ್ನೋದನ್ನು ಮಾತ್ರ ಹರೀಶ್ ರಾಯ್ ಹೇಳಿಲ್ಲ. ಆದರೂ ಹರೀಶ್ ರಾಯ್ ಗೆ ಸಹಾಯ ಮಾಡಲು ಮುಂದೆ ಬಂದಿರುವ ನಟ ಬೇರಾರು ಅಲ್ಲ ರಾಕಿಂಗ್ ಸ್ಟಾರ್ ಯಶ್ ಎಂಬ ಮಾತುಗಳು ಕೇಳಿ ಬರುತ್ತಿದೆ. ಹರೀಶ್ ರಾಯ್ ಹಾಗೂ ಯಶ್ ಕೆಜಿಎಫ್ 2 ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಮಧ್ಯೆಯೂ ಉತ್ತಮ ಬಾಂದವ್ಯ ಇದ್ದು ಇದೀಗ ಯಶ್ ಹರೀಶ್ ರಾಯ್ ನೆರವಿಗೆ ನಿಂತಿದ್ದಾರೆ ಎನ್ನಲಾಗುತ್ತಿದೆ. ಸಂದರ್ಶನದ ವೇಳೆ ಹರೀಶ್ ರಾಯ್ ಅವರ ಫೋನ್ ನಂಬರ್ ಕೂಡ ನೀಡಿದ್ದಾರೆ. 9606960656 ಈ ನಂಬರ್‌ಗೆ ಹಣ ಹಾಕುವ ಮೂಲಕ ನೀವೂ ಕೂಡ ಅವರಿಗೆ ಸಹಾಯ ಮಾಡಬಹುದಾಗಿದೆ.
