• June 13, 2026

ಹೆಂಡತಿಯ ಕ್ಯಾಮೆರಾದಲ್ಲಿ ಬೆತ್ತಲಾದ ತಮಿಳು ನಟ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಫೋಟೋ

ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗೆ ಮ್ಯಾಗಸೀನ್ ಒಂದಕ್ಕೆ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ರಣವೀರ್ ಬೆತ್ತಲೆ ಫೋಟೋ ಶೂಟ್ ಬಗ್ಗೆ ಚರ್ಚೆಯಾಗುತ್ತಿರುವ ಸಮಯದಲ್ಲಿಯೇ ತಮಿಳು ನಟರೊಬ್ಬರು ತಮ್ಮ ನಗ್ನ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಾಯಕರಾಗಿ ಬಣ್ಣ ಹಚ್ಚಿರುವ ನಟ ವಿಷ್ಣು ವಿಶಾಲ್ ತಮ್ಮ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲಾ ತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ತಮ್ಮ ಪತ್ನಿ ಖ್ಯಾತ ಬ್ಯಾಡ್ ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರಿಂದ ಫೋಟೋ ತೆಗೆಸಿಕೊಂಡಿರುವ ವಿಷ್ಣು ಅದನ್ನು ಶೇರ್ ಮಾಡಿದ್ದಾರೆ.ರಣವೀರ್ ರಂತೆ ಮೈಮೇಲೆ ತುಂಡು ಬಟ್ಟೆಯನ್ನು ಹಾಕಿಕೊಳ್ಳದ ವಿಷ್ಣು ತಮ್ಮ ಖಾಸಗಿ ಅಂಗವನ್ನು ಬೇಡ್ ಶೀಟ್ ನಿಂದ ಮುಚ್ಚಿಕೊಂಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ನಾಲ್ಕು ಫೋಟೋಗಳನ್ನು ವಿಷ್ಣು ವಿಶಾಲ್ ಹಂಚಿಕೊಂಡಿದ್ದು, ನಾನು ಸಹ ಟ್ರೆಂಡ್ ಸೇರಿಕೊಂಡೆ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋವನ್ನು ಪತ್ನಿ ಜ್ವಾಲಾ ಗುಟ್ಟಾ ತೆಗೆದಿದ್ದಾರೆ ಎಂದು ಬರೆದುಕೊಂಡು ಫೋಟೋವನ್ನು ಪತ್ನಿಗೂ ಟ್ಯಾಗ್ ಮಾಡಿದ್ದಾರೆ. ವಿಷ್ಣು ವಿಶಾಲ್ ಫೋಟೋಗೆ ಸಾಕಷ್ಟು ಮಂದಿ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಸಾಕಷ್ಟು ಮಂದಿ ವಿಷ್ಣು ಫೋಟೋವನ್ನು ಸಮರ್ಥಿಸಿಕೊಂಡಿದ್ದಾರೆ. ವಿಷ್ಣು ಪೂರ್ಣ ಬೆತ್ತಲೆ ಫೋಟೋವನ್ನು ಪ್ರದರ್ಶಿಸಿಲ್ಲ ಎಂದು ವಿಷ್ಣು ಪರವಾಗಿ ನಿಂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now