• March 14, 2026

ಮತ್ತಷ್ಟು ಹೆಚ್ಚಾಯ್ತು ನಟಿ ರಶ್ಮಿಕಾ ಮಂದಣ್ಣ ಕ್ರೇಜ್: ಹಠ ಹಿಡಿದು ಎದೆ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡ ಅಭಿಮಾನಿ

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾದಲ್ಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಹೋದ ಕಡೆ, ಬಂದ ಕಡೆ ಎಲ್ಲಾ ಅಭಿಮಾನಿಗಳು ಆಕೆಯನ್ನು ನೋಡಲು ಮುಗಿ ಬೀಳುತ್ತಾರೆ. ಸದ್ಯ ರಶ್ಮಿಕಾರ ಹುಚ್ಚು ಅಭಿಮಾನಿಯೊಬ್ಬ ತನ್ನ ಎದೆ ಮೇಲೆ ಆಟೋಗ್ರಾಫ್ ಹಾಕಿ ಎದ್ದು ಹಠ ಹಿಡಿದು ಆಟೋಗ್ರಾಫ್ ಹಾಕಿಸಿಕೊಂಡಿದ್ದಾನೆ. ಪುಷ್ಪ ಸಿನಿಮಾದ ಬಳಿಕ ರಶ್ಮಿಕಾ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಪುಷ್ಪ ಬಳಿಕ ರಶ್ಮಿಕಾ ಬಾಲಿವುಡ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದು ಸದ್ಯ ಬಿಗ್ ಬಿ ಜೊತೆ ನಟಿಸಿರುವ ಗುಡ್ ಬೈ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಗಾಗ್ಲೆ ಗುಡ್ ಬೈ ಸಿನಿಮಾದ ಟ್ರೈಲರ್ ಮೂಲಕ ರಶ್ಮಿಕಾ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಗುಡ್ ಬೈ ಸಿನಿಮಾದ ಪ್ರಮೋಶನ್‍ ಗಾಗಿ ರಶ್ಮಿಕಾ ಹೋಗಿದ್ದ ವೇಳೆ ಅಭಿಮಾನಿಯೊಬ್ಬ ಗೋಗರೆದು ಆಕೆಯ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. ಬಳಿಕ ಆಟೋಗ್ರಾಫ್ ಬೇಕು ಎಂದಿದ್ದಾನೆ. ಆಟೋಗ್ರಾಫ್ ಹಾಕಲು ಹೋದ ರಶ್ಮಿಕಾಗೆ ಎದೆಯ ಮೇಲೆ ಆಟೋಗ್ರಾಫ್ ಹಾಕಿ ಎಂದು ಕಾಡಿ ಬೇಡಿ ಹಾಕಿಸಿಕೊಂಡಿದ್ದಾನೆ. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ನೀವು ಅಂದ್ರೆ ತುಂಬಾ ಇಷ್ಟ . ನಾನು ನಿಮ್ಮ ದೊಡ್ಡ ಅಭಿಮಾನಿ ಎಂದಿದ್ದಾನೆ. ರಶ್ಮಿಕಾಗೂ ಅದನ್ನು ಕಂಡು ಖುಷಿಯಾಗಿದೆ. ಮೇಡಂ ನಿಮ್ಮ ಆಟೋಗ್ರಾಫ್ ಬೇಕು ಎನ್ನುತ್ತಾನೆ. ಹಾಕಲು ಹೋದ್ರೆ, ಎದೆ ಮೇಲೆ ಆಟೋಗ್ರಾಫ್ ಬೇಕೇ ಬೇಕು ಎನ್ನುತ್ತಾನೆ. ಕೊನೆಗೆ ರಶ್ಮಿಕಾ ಅಭಿಮಾನಿ ಎದೆ ಮೇಲೆ ಆಟೋಗ್ರಾಫ್ ಹಾಕಿ ಹೋಗ್ತಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now