• February 10, 2026

ಭಾರತ vs ಇಂಗ್ಲೆಂಡ್: ಭಾರತದ ದಾಖಲೆ ಬರೆದ ರಿಷಭ್ ಪಂತ್- ರವೀಂದ್ರ ಜಡೇಜಾ ಜೋಡಿ

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ತ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದರೂ ನಂತರ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದು ಮೊದಲ ದಿನದಾಟದ ಗೌರವ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಅಗ್ರ ಕ್ರಮಾಂಕದ ದಾಂಡಿಗರು ಸಂಪೂರ್ಣ ವಿಫಲವಾಗುವ ಮೂಲಕ ಕನಿಷ್ಠ ಮೊತ್ತಕ್ಕೆ ಕುಸಿಯವ ಭೀತಿಯನ್ನು ಎದುರಿಸಿತ್ತು ಭಾರತ. ಆದರೆ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಜೋಡಿಯಿಂದ ಭಾರತಕ್ಕೆ ನಿರ್ಣಾಯಕ ಜೊತೆಯಾಟ ಲಭ್ಯವಾಗಿದೆ. ಇಬ್ಬರು ಆಟಗಾರರು ಕೂಡ ಪಂದ್ಯದ ಬಹುತೇಕ ಅವಧಿಯನ್ನು ಭಾರತದ ಪರವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತದ ಪರವಾಗಿ ದಾಖಲೆಯೊಂದನ್ನು ಬರೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

222 ರನ್‌ಗಳ ಜೊತೆಯಾಟ ನೀಡಿದ ಪಂತ್-ಜಡ್ಡು

ಇಂಗ್ಲೆಂಡ್ ತಂಡದ ಅನುಭವಿ ಬೌಲರ್ ಜೇಮ್ಸ್ ಆಂಡರ್ಸನ್ ದಾಳಿಗೆ ಆಘಾತ ಅನುಭವಿಸಿದ ಭಾರತ ತಂಡ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತ್ತು. 28 ಓವರ್‌ಗಳ ಅಂತ್ಯಕ್ಕೆ 98 ರನ್‌ಗಳಿಗೆ ಭಾರತ ತಂಡ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇಂಗ್ಲೆಂಡ್ ಬೌಲರ್‌ಗಳು ಮತ್ತೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಆರನೇ ವಿಕೆಟ್‌ಗೆ ಈ ಜೋಡಿ ಬರೊಬ್ಬರಿ 222 ರನ್‌ಗಳ ಜೊತೆಯಾಟ ನೀಡಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ದಾಖಲೆ

ಎಡ್ಸ್‌ಬಾಸ್ಟನ್ ಟೆಸ್ಟ್‌ನಲ್ಲಿ 222 ರನ್‌ಗಳ ಜೊತೆಯಾಟ ನೀಡಿದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಜೋಡಿ ಇಂಗ್ಲೆಂಡ್ ನೆಲದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. 6ನೇ ವಿಕೆಟ್‌ಗೆ ಭಾರತದ ಜೋಡು ಇಂಗ್ಲೆಂಡ್‌ನಲ್ಲಿ ಬಾರಿಸಿದ ಅತಿ ಹೆಚ್ಚಿನ ಮೊತ್ತ ಎನಿಸಿಕೊಂಡಿದೆ. ಅಲ್ಲದೆ ಈ ಜೊತೆಯಾಟ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚಿನ ಜೊತೆಯಾಟ ಎನಿಸಿಕೊಂಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now