• January 1, 2026

ನಾನು ಹಾಟ್ ಆಗಿ ಕಾಣಿಸಿಕೊಂಡರೆ ಫ್ಯಾನ್ಸ್ ಒಪ್ಪಲ್ಲ ಎಂದ ರಚಿತಾ ರಾಮ್

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಯಾವುದೇ ಪಾತ್ರಗಳಿಗೂ ಹೇಳಿ ಮಾಡಿಸಿದ ನಟಿ. ಫ್ಯಾಮಿಲಿ ಹುಡುಗಿಕಾಗಿ ಕಾಣಿಸಿಕೊಳ್ತಿದ್ದ ರಚಿತಾ ರಾಮ್ ಉಪೇಂದ್ರ ಜೊತೆ ಐ ಲವ್ ಯೂ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಆ ಬಳಿಕ ನಾನು ಈ ರೀತಿ ಕಾಣಿಸಿಕೊಳ್ಳಬಾರದಿತ್ತು. ನನ್ನ ತಂದೆಗೂ ಇದು ಇಷ್ಟವಾಗಿಲ್ಲ ಎಂದು ಹೇಳಿ ಮಾಧ್ಯಮಗಳ ಮುಂದೆ ಕಣ್ಣಿರಿಟ್ಟಿದ್ದರು. ರಚಿತಾ ರಾಮ್ ಹೇಳಿಕೆ ನೋಡಿ ಇನ್ಮುಂದೆ ರಚ್ಚು ಬೋಲ್ಡ್ ಪಾತ್ರಗಳಲ್ಲಿ ನಟಿಸಲ್ಲ ಅಂತಲೇ ಸಾಕಷ್ಟು ಮಂದಿ ಅಂದುಕೊಂಡಿದ್ದರು. ಅಷ್ಟರಲ್ಲಾಗಲೇ ಅಜಯ್ ರಾವ್ ಜೊತೆ ರಚ್ಚು ಚಿತ್ರದಲ್ಲಿ ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡರು. ಜೊತೆಗೆ ಫಸ್ಟ್ ನೈಟ್ ನಲ್ಲಿ ಏನು ಮಾಡುತ್ತಾರೋ ಅದನ್ನೇ ನಾನು ಈ ಸಿನಿಮಾದಲ್ಲಿ ಮಾಡಿದ್ದೀನಿ ಎಂದು ಹೇಳಿ ಸಖತ್ ಟ್ರೋಲ್ ಆಗಿದ್ದರು. ಇದೀಗ ಮತ್ತೆ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ತೆರೆ ಕಾಣಲು ರೆಡಿಯಾಗಿದೆ. ಇಲ್ಲೂ ರಚ್ಚು ಸಖತ್ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ ಮಾನ್ಸೂನ್ ರಾಗ ಸಿನಿಮಾದಲ್ಲಿ ರಚಿತಾ ರಾಮ್ ಸ್ಕಿನ್ ತೋರಿಸುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಅದು ಪಾತ್ರಕ್ಕೆ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ. ನಾನು ಸ್ಕಿನ್ ತೋರಿಸಿದರೆ, ಹಾಟ್ ಆಗಿ ಕಾಣಿಸಿಕೊಂಡರೆ ಅಭಿಮಾನಿಗಳು ಒಪ್ಪುವುದಿಲ್ಲ ಎಂದಿದ್ದಾರೆ. ಸದ್ಯ ರಚಿತಾ ರಾಮ್ ಹಾಗೂ ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಿದೆ. ಪುಷ್ಪಕವಿಮಾನ ಖ್ಯಾತಿಯ ರವೀಂದ್ರನಾಥ್ ನಿರ್ದೇಶನ ಮಾಡಿದ್ದು, ವಿಖ್ಯಾತ್ ಎ.ಆರ್. ಅವರು ಬಂಡವಾಳ ಹೂಡಿದ್ದಾರೆ. ಡಾಲಿ ಧನಂಜಯ್​, ರಚಿತಾ ರಾಮ್​ ಜೊತೆಗೆ ಯಶಾ ಶಿವಕುಮಾರ್​, ಅಚ್ಯುತ್​ ಕುಮಾರ್​, ಸುಹಾನಿಸಿ ಮಣಿರತ್ನಂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು ಅನುಪ್ ಸಿಳಿನ್ ಸಂಗೀತ ನೀಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now