ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಚೇತನ್ ಗೆ ತಾಕತ್ತಿದ್ರೆ ಮಂಗಳೂರಿಗೆ ಬಂದು ಪ್ರಶ್ನೆ ಮಾಡಲಿ: ಕಾಂತಾರದ ಗುರುವ ಪಾತ್ರಧಾರಿ
ಭೂತಾರಾಧನೆ ಮತ್ತು ಹಿಂದುತ್ವದ ಸಂಬಂಧದ ಬಗ್ಗೆ ಮಾತನಾಡಬಾರದು. ಅದರ ಬಗ್ಗೆ ನಿಮಗೆ ಗೊತ್ತಿದ್ಯಾ? ನಿಮ್ಮಲ್ಲಿ ಸಾಕ್ಷ್ಯ ಏನಿದೆ? ನಮ್ಮ ಪೂರ್ವಜರು ಹೇಳಿದ್ದನ್ನು ನಾವು ಮಾಡಿಕೊಂಡು ಬರ್ತಾ ಇದೀವಿ. ದೈವಾರಾಧನೆ ಮತ್ತು ಕಾಂತಾರದ ವಿಷಯ ಬೇಡ, ಸಿನಿಮಾ ಸಿನಿಮಾವಾಗಿಯೇ ಇರಲಿ ಎಂದಿದ್ದಾರೆ. ಅಲ್ಲದೇ ಚೇತನ್ ಒಬ್ಬ ನಟರಾಗಿ ಕಾಂತಾರವನ್ನು ಸಿನಿಮಾವಾಗಿಯೇ ನೋಡಿ ಖುಷಿ ಪಡಲಿ. ಅದು ಬಿಟ್ಟು ಬೇಳೆ ಬೇಯಿಸಿ ಕೊಳ್ಳುವ ಕೆಲಸ ಬೇಡ ಎಂದಿದ್ದಾರೆ.
ದೈವಾರಾಧನೆ ಇವತ್ತು ನಿನ್ನೆಯದಲ್ಲ, ಕಾಂತಾರ ನೋಡಿದ ನಂತರವೇ ಅದರ ಬಗ್ಗೆ ಅವರಿಗೆ ಗೊತ್ತಾಗಿದೆ. ಈಗ ಅವರು ನಮ್ಮ ಚಿತ್ರಕ್ಕೆ ಪ್ರಚಾರದ ಕೆಲಸ ಮಾಡ್ತಿದ್ದಾರೆ. ಆದರೆ ಇವರ ಪಬ್ಲಿಸಿಟಿ ನಮಗೆ ಬೇಕಾಗಿಲ್ಲ. ಆದರೂ ಅವರಿಗೊಂದು ದೊಡ್ಡ ಧನ್ಯವಾದ ಎಂದಿದ್ದಾರೆ. ಕಾಂತಾರ ಸಿನಿಮಾ ಬಗ್ಗೆ ಮಾತು ಬೇಡ. ಮಂಗಳೂರಿಗೆ ಬಂದು ಪ್ರಶ್ನೆ ಕೇಳುವ ತಾಕತ್ ಇದ್ರೆ ಚೇತನ್ ಬಂದು ಮಾತನಾಡಲಿ. ನಾಳೆ ದೈವಕ್ಕೆ ಕೋಪ ಬಂದ್ರೆ ಅವನನ್ನು ಮಾತ್ರ ಖಂಡಿತಾ ಬಿಡಲ್ಲ. ಇದರಿಂದ ಸಿನಿಮಾಗೆ ಡ್ಯಾಮೇಜ್ ಇಲ್ಲ, ಇದರಿಂದ ಪಬ್ಲಿಸಿಟಿ ಅಷ್ಟೇ ಎಂದು ಸ್ವರಾಜ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
