• February 10, 2026

ಮುಂದಿನ ದಿನಗಳಲ್ಲಿ ಸುದೀಪ್ ಜೊತೆ ಸಿನಿಮಾ ಮಾಡಬಹುದು: ನಟಿ ರಮ್ಯಾ

ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನ ಬೆಸ್ಟ್ ಪೇರ್ ಅನಿಸಿಕೊಂಡವ್ರು ಕಿಚ್ಚ ಸುದೀಪ್ ಹಾಗೂ ಮೋಹಕ ತಾರೆ ರಮ್ಯಾ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಅವುಗಳಲ್ಲಿ 2008ರಲ್ಲಿ ರಿಲೀಸ್ ಆದ ಮುಸ್ಸಂಜೆ ಮಾತು ಸೂಪರ್ ಹಿಟ್ ಎನಿಸಿಕೊಂಡಿತ್ತು. ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡ್ಬೇಕು ಅನ್ನೋದು ಲಕ್ಷಾಂತರ ಅಭಿಮಾನಿಗಳ ಆಸೆ. ಆ ಆಸೆ ಇಡೇರುವ ಸುಳಿವನ್ನು ಸ್ವತಃ ನಟಿ ರಮ್ಯಾ ನೀಡಿದ್ದಾರೆ. 2004ರಲ್ಲಿ ತೆರೆಕಂಡ ರಂಗ ಎಸ್ ಎಸ್ ಎಲ್ ಸಿ ಸಿನಿಮಾದ ಮೂಲಕ ಒಂದಾಗಿದ್ದ ರಮ್ಯಾ ಹಾಗೂ ಸುದೀಪ್ ಮೊದಲ ಸಿನಿಮಾದಲ್ಲೇ ಬೆಸ್ಟ್ ಪೇರ್ ಅನಿಸಿಕೊಂಡರು. ಆ ಬಳಿಕ ತೆರೆಕಂಡ ಮುಸ್ಸಂಜೆ ಮಾತು, ಜಸ್ಟ್ ಮಾತ್ ಮಾತಲ್ಲಿ, ಕಿಚ್ಚ ಹುಚ್ಚ ಚಿತ್ರಗಳು ಸೂಪರ್ ಹಿಟ್ ಆದವು. ಆ ಬಳಿಕ ಮತ್ತೆ ಈ ಜೋಡಿಯನ್ನು ತೆರೆ ಮೇಲೆ ನೋಡಲು ಸಾಧ್ಯವಾಗಿರಲಿಲ್ಲ. ಇದೀಗ ರಮ್ಯಾ ತಮ್ಮದೆ ನಿರ್ಮಾಣ ಸಂಸ್ಥೆಯಾದ ಆಪಲ್ ಬಾಕ್ಸ್ ಸ್ಟುಡಿಯೋಸ್ ಆರಂಭಿಸಿದ್ದು ಆ ಮೂಲಕ ಸ್ಯಾಂಡಲ್ ವುಡ್ ಸಿನಿ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ನಿರ್ಮಾಣ ಸಂಸ್ಥೆ ಮೂಲಕ ಈಗಾಗಲೇ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಆರಂಭವಾಗಿದೆ. ಈ ಚಿತ್ರವನ್ನು ರಾಜ್ ಬಿ. ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ರಮ್ಯಾ ನಟಿಸುತ್ತಿದ್ದಾರೆ. ಅಂದ ಹಾಗೆ ರಮ್ಯಾ ಹಾಗೂ ಪುನೀತ್ ರಾಜ್ ಕುಮಾರ್ ಮತ್ತೆ ಒಟ್ಟಿಗೆ ಸಿನಿಮಾ ಮಾಡಬೇಕಿತ್ತು. ಅಪ್ಪು ಸಿನಿಮಾದ ಮೂಲಕ ರಮ್ಯಾ ಕಂಬ್ಯಾಕ್ ಮಾಡೋ ಪ್ಲಾನ್ ಇತ್ತು. ಈ ಬಗ್ಗೆ ರಮ್ಯಾ ಹಾಗೂ ಪುನೀತ್ ರಾಜ್ ಕುಮಾರ್ ಮಾತನಾಡಿಕೊಂಡಿದ್ದರು. ಆದರೆ ಅದು ಸಾಧ್ಯವಾಗಲೆ ಇಲ್ಲ. ಇದೀಗ ಮುಂದಿನ ದಿನಗಳಲ್ಲಿ ಕಿಚ್ಚ ಸುದೀಪ್ ಅವರ ಜೊತೆಯೂ ನಟಿಸಬಹುದು ಎಂದು ಹೇಳಿ ಕುತೂಹಲ ಹೆಚ್ಚಿಸಿದ್ದಾರೆ. ಅಂದಹಾಗೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಿರುವ ಕುರಿತು ಭಯ ಹಾಗೂ ಎಗ್ಸೈಟ್ ಮೆಂಟ್ ಎರಡು ಇದೆ. ಲಾಕ್ ಡೌನ್ ಸಂದರ್ಭದಲ್ಲಿ ರಮ್ಯಾ ಸಾಕಷ್ಟು ಕಥೆಯನ್ನು ಕೇಳಿದ್ದರು. ಆದ್ರೆ ರಾಜ್ ಬಿ ಶೆಟ್ಟಿ ಹೇಳಿದ ಕಥೆ ರಮ್ಯಾಗೆ ಸಖತ್ ಇಷ್ಟವಾಗಿದೆ. ಅಲ್ಲದೆ ಚಿತಕ್ಕೆ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಟೈಟಲ್ ಕೂಡ ರಾಜ್ ಬಿ ಶೆಟ್ಟಿಯೇ ನೀಡಿದ್ದಾರೆ. ಕಥೆ, ಟೈಟಲ್ ಎರಡು ಇಷ್ಟವಾಗಿದ್ದು ಈ ಸಿನಿಮಾದ ಮೂಲಕ ರಮ್ಯಾ ಕಂಬ್ಯಾಕ್ ಮಾಡ್ತಿದ್ದಾರೆ. ಮೋಹಕತಾರೆಯನ್ನು ಮತ್ತೆ ತೆರೆ ಮೇಲೆ ನೋಡ್ಬೇಕು ಅನ್ನೋದು ಕೋಟ್ಯಾಂತರ ಅಭಿಮಾನಿಗಳ ಆಸೆ. ಆದಷ್ಟು ಬೇಗ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕಂಪ್ಲೀಟ್ ಆಗಿ ತೆರೆ ಮೇಲೆ ಬರಲಿ ಅಂತಿದ್ದಾರೆ ರಮ್ಯಾ ಅಭಿಮಾನಿಗಳು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now