ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಭೂತಕೋಲ ಹಿಂದೂ ಸಂಸ್ಕೃತಿಯಲ್ಲ: ಸಮರ್ಥಿಸಿಕೊಂಡ ನಟ ಚೇತನ್ ಕುಮಾರ್
ತಮ್ಮ ಹೇಳಿಕೆಗೆ ಮತ್ತೆ ಸ್ಪಷ್ಟನೆ ನೀಡಿರುವ ಚೇತನ್, ರಿಷಬ್ ಬಳಸಿದ ‘ಹಿಂದೂ ಸಂಸ್ಕೃತಿ’ ಪದಕ್ಕೆ ನನ್ನ ಆಕ್ಷೇಪಣೆ ಇದೆ ಎಂದಿದ್ದಾರೆ. ಬುಡಕಟ್ಟು ನಮ್ಮ ಮೂಲ ಸಂಸ್ಕೃತಿ. ಇವರಿಗೆ 70 ಸಾವಿರ ವರ್ಷಕ್ಕೂ ಅಧಿಕ ಇತಿಹಾಸವಿದೆ. ಹಿಂದೂ ಧರ್ಮಕ್ಕೆ ಕೇವಲ ಮೂರುವರೆ ಸಾವಿರ ವರ್ಷ ಇತಿಹಾಸ. ದೈವಾರಾಧನೆ, ಭೂತಕೋಲ ಇವುಗಳು ಬುಡಕಟ್ಟು ಸಂಸ್ಕೃತಿಗಳು. ಅದು ಹೇಗೆ ಹಿಂದೂ ಸಂಸ್ಕೃತಿ ಆಗುತ್ತವೆ? ಎಂದರು.
ನಮ್ಮ ಕನ್ನಡದ ಚಲನಚಿತ್ರ `ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
