• March 16, 2026

ನಾನು ನಗುತ್ತಿದ್ದೇನೆ ಎಂದರೆ ಅದು ನಿನಗಾಗಿ ಮಾತ್ರ: ನಟಿ ಮೇಘನಾ ರಾಜ್

ಇಂದು ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾರ ಹುಟ್ಟುಹಬ್ಬ. ಚಿರು ಹುಟ್ಟುಹಬ್ಬದ ಹಿನ್ನೆಲೆ ಪತ್ನಿ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಇಬ್ಬರು ಜೊತೆಗೆ ನಗು ನಗುತ್ತಿರುವ ಫೋಟೋವನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ‘ನನ್ನ ಖುಷಿಗೆ ಹುಟ್ಟು ಹಬ್ಬದ ಶುಭಾಶಯಗಳು. ಇಂದು ನಾನು ನಗುತ್ತಿದ್ದೇನೆ ಅಂದರೆ, ಅದು ನಿನಗಾಗಿ ಮಾತ್ರ. ನನ್ನ ಆತ್ಮೀಯ ಪತಿ ಚಿರು.. ಐ ಲವ್ ಯೂ’ ಎಂದು ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿದ್ದ ಚಿರು ಹಾಗೂ ಮೇಘನಾ ಬಳಿಕ ಸ್ನೇಹಿತರಾಗಿ ನಂತರ ಪ್ರೇಮಿಗಳಾಗಿದ್ದರು. ಬಳಿಕ ಎರಡು ಕುಟುಂಬಸ್ಥರ ಒಪ್ಪಿಗೆ ಪಡೆದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾದ ಕೆಲ ವರ್ಷಗಳಲ್ಲಿಯೇ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿರು ನಿಧನದ ಬಳಿಕ ಸಿನಿಮಾ ರಂಗದಿಂದ ದೂರವಾಗಿದ್ದ ನಟಿ ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾನ ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಇತ್ತಿಚೆಗೆ ಮತ್ತೆ ಮೇಘನಾ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತೊಡಗಿಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now