• March 14, 2026

ಆರ್ಯವರ್ಧನ್ ಪಾತ್ರದಲ್ಲಿ ಅನೂಪ್ ಭಂಡಾರಿ: ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸೋ ಬಗ್ಗೆ ವಿಕ್ರಾಂತ್ ರೋಣ ನಿರ್ದೇಶರು ಏನ್ ಹೇಳಿದ್ರು?

ಜೀ ಕನ್ನ ಡದಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಈಗಾಗ್ಲೆ ಜಗಜ್ಜಾಹಿರಾಗಿದೆ. ಧಾರಾವಾಹಿ ತಂಡ ಹಾಗೂ ಅನಿರುದ್ಧ್ ನಡುವಿನ ಮನಸ್ತಾಪದಿಂದ ಸದ್ಯ ಅನಿರುದ್ಧ್ ರನ್ನು ಕೈ ಬಿಡಲಾಗಿದೆ. ಈ ಮಧ್ಯೆ ಅನಿರುದ್ಧ್ ಮತ್ತೆ ಕರೆದರೆ ಸೀರಿಯಲ್ ನಲ್ಲಿ ನಟಿಸೋದಾಗಿ ಹೇಳಿದ್ದರು ಚಿತ್ರತಂಡ ಹೊಸ ನಟನ ಹುಡುಕಾಟದಲ್ಲಿ ಬ್ಯುಸಿಯಾಗಿದೆ. ಈ ಮಧ್ಯೆ ಖ್ಯಾತ ನಿರ್ದೇಶಕ ಅನೂಪ್ ಭಂಡಾರಿಗೂ ಆಫರ್ ಹೋಗಿದ್ದು ಈ ಬಗ್ಗೆ ಸ್ವತಃ ಅನೂಪ್ ಸ್ಪಷ್ಟನೆ ನೀಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಅರ್ಯವರ್ಧನ್ ಪಾತ್ರಧಾರಿ ಹಾಗೂ ನಿರ್ದೇಶಕ ಅನೂಪ್ ಭಂಡಾರಿಗೂ ಸಾಕಷ್ಟು ಸಾಮ್ಯತೆ ಇದೆ. ಇದೇ ಕಾರಣಕ್ಕೆ ಅರ್ಯವರ್ಧನ್ ಜಾಗಕ್ಕೆ ಅನೂಪ್ ಬರ್ತಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಅಲ್ಲದೆ ಅನಿರುದ್ಧ್ ರಿಂದ ತೆರವಾಗಿರುವ ಆರ್ಯವರ್ಧನ್ ಜಾಗಕ್ಕೆ ಖಡಕ್ ನಾಯಕನ್ನೇ ತರುವ ಅನಿವಾರ್ಯತೆ ತಂಡಕ್ಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅನೂಪ್ ತಮಗೆ ಆಫರ್ ಬಂದಿರೋದು ನಿಜ ಎಂದಿದ್ದಾರೆ. ಧಾರಾವಾಹಿ ತಂಡದ ಕಡೆಯಿಂದ ಅನೂಪ್ ಭಂಡಾರಿಗೆ ಆಫರ್ ಹೋಗಿತ್ತು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿತ್ತು. ಈ ಬಗ್ಗೆ ಅನೂಪ್ ಭಂಡಾರಿ ಪ್ರತಿಕ್ರಿಯಿಸಿದ್ದು, ‘ಧಾರಾವಾಹಿ ತಂಡದವರು ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ನಾನು ಆಫರ್ ತಿರಸ್ಕರಿಸಿದ್ದೇನೆ. ಸದ್ಯ ಮುಂದಿನ ಸಿನಿಮಾ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಬ್ಯುಸಿ ಆಗಿದ್ದು, ಸದ್ಯದಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡುತ್ತೇನೆ’ ಎಂದಿದ್ದಾರೆ. ವಿಭಿನ್ನ ಪ್ರೇಮಕಥೆ ಹೊಂದಿರುವ ಜೊತೆ ಜೊತೆಯಲಿ ಧಾರಾವಾಹಿ ಒಂದು ಕಾಲದಲ್ಲಿ ಟಿಆರ್ ಪಿ ರೇಟಿಂಗ್ ನಲ್ಲಿ ಮೊದಲ ಸ್ಥನದಲ್ಲಿತ್ತು. ಆದರೆ ಬರು ಬರುತ್ತಾ ರೇಟಿಂಗ್ ನಲ್ಲಿ ಇಳಿಕೆ ಕಂಡಿದ್ದು ಇದಕ್ಕೆಲ್ಲ ನಟ ಅನಿರುದ್ಧ್ ನೇರಾ ಕಾರಣ ಎಂದು ಧಾರಾವಾಹಿ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು ಜಗದೀಶ್ ಆರೋಪಿಸಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವೊಂದು ವಿಚಾರಗಳನ್ನು ಇಟ್ಟುಕೊಂಡು ಆರೂರು ಜಗದೀಶ್, ಅನಿರುದ್ಧ್​ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ದೂರು ಆಧರಿಸಿ ಅನಿರುದ್ಧ್​ ವಿರುದ್ಧ ಕ್ರಮ ಕೈಗೊಂಡಿದ್ದು,ಎರಡು ವರ್ಷಗಳ ಕಾಲ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ. ಈ ಕಾರಣದಿಂದ ಆರ್ಯವರ್ಧನ್​ ಪಾತ್ರಕ್ಕೆ ಹೊಸ ಕಲಾವಿದರ ಆಯ್ಕೆ ನಡೆಯತ್ತಿದ್ದು ಆರ್ಯವರ್ಧನ್ ಪಾತ್ರಧಾರಿ ಯಾರಾಗಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now