ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಐಶ್ವರ್ಯ ರೈ ನೋಡಿದರೆ ನನಗೆ ಹೊಟ್ಟೆ ಉರಿ: ಪಬ್ಲಿಕ್ ಆಗಿಯೇ ಹೇಳಿಕೊಂಡ ನಟಿ ಮೀರಾ
ಸದ್ಯ ಐಶ್ವರ್ಯ ರೈ ನಟನೆಯ ಪೊನ್ನಿಯನ್ ಸೆಲ್ವನ್ ಸಿನಿಮಾ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಐಶ್ವರ್ಯ ರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಮೀನಾ, ಐಶ್ವರ್ಯ ರೈ ಮಾಡಿರುವ ರಾಣಿ ನಂದಿನಿ ಪಾತ್ರವನ್ನು ನಾನು ಮಾಡಬೇಕಿತ್ತು. ಅದು ನನ್ನ ಡ್ರೀಮ್ ರೋಲ್. ಈ ಪಾತ್ರ ಮಾಡುವ ಅವಕಾಶ ಗಿಟ್ಟಿಸಿಕೊಂಡ ಐಶ್ವರ್ಯ ರೈ ಅವರನ್ನು ನೋಡಿ ನನಗೆ ಹೊಟ್ಟೆಕಿಚ್ಚು ಆಗುತ್ತಿದೆ. ಮೊದಲ ಬಾರಿಗೆ ನನ್ನ ಜೀವನದಲ್ಲಿ ಒಬ್ಬರನ್ನು ನೋಡಿ ಅಸೂಯೆ ಆಗುತ್ತಿದೆ. ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ನಟಿಸಿರುವ ಎಲ್ಲರಿಗೂ ಅಭಿನಂದನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯನ್ ಸೆಲ್ವನ್ ಜಯಕಾದಂಬರಿ ಆಧಾರಿತ ಪೊನ್ನಿಯನ್ ಸೆಲ್ವನ್ ಸಿನಿಮಾವನ್ನು ಮುನಿರತ್ನಂ ನಿರ್ದೇಶನ ಮಾಡಿದ್ದು ಐಶ್ವರ್ಯ ರೈ, ತ್ರಿಷಾ, ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಪ್ರಕಾಶ್ ರೈ ಸೇರಿಂತೆ ಸಾಕಷ್ಟು ಮಂದಿ ಸಿನಿಮಾದಲ್ಲಿ ನಟಿಸಿದ್ದಾರೆ.
