• March 17, 2026

ಭಾರಿ ಮೊತ್ತಕ್ಕೆ ಸೇಲ್ ಆಯ್ತು ‘F0R REGN’ ಆಡಿಯೋ ರೈಟ್ಸ್

ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ವಿಭಿನ್ನ ಕಾನ್ಸೆಪ್ಟ್ ನಲ್ಲಿ ನಿಲ್ಲುವ ಸಿನಿಮಾಗಳಲ್ಲಿ ಲವ್ ಮಾಕ್ಟೇಲ್ ಹಾಗೂ ದಿಯಾ ಸಿನಿಮಾಗಳು ಒಂದು. ಇದೀಗ ಈ ಎರಡು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ನಟ, ನಟಿಯರು ಇದೀಗ ಫಾರ್ ರಿಜಿಸ್ಟ್ರೇಷನ್ ಸಿನಿಮಾದಲ್ಲಿ ಒಂದಾಗ್ತಿದ್ದಾರೆ. ಇದೀಗ ಚಿತ್ರದ ಹಾಡುಗಳಿಗೆ ಭಾರಿ ಬೇಡಿಕೆ ಬಂದಿದೆ. ದಿಯಾ ಸಿನಿಮಾದಲ್ಲಿ ನಟಿಸಿದ್ದ ಪೃಥ್ವಿ ಅಂಬರ್ ಹಾಗೂ ಲವ್ ಮಾಕ್ಟೇಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮಿಲನಾ ನಾಗರಾಜ್ ಫಾರ್ ರಿಜಿಸ್ಟ್ರೇಷನ್ ಎಂಬ ಸಿನಿಮಾದಲ್ಲಿ ನಾಯಕ, ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಈಗಾಗ್ಲೆ ಬಹುತೇಕ ಶೂಟಿಂಗ್ ಮುಗಿದಿದ್ದು  ಚಿತ್ರದ ಹಾಡುಗಳಿಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಎಂಟಟೇನರ್ ಕಥೆ ಆಧರಿಸಿರುವ ಫಾರ್ ರಿಜಿಸ್ಟ್ರೇಷನ್ ಸಿನಿಮಾದ ಹಾಡುಗಳನ್ನು ಝೇಂಕಾರ್ ಮ್ಯೂಸಿಕ್ 30 ಲಕ್ಷಕ್ಕೆ ಖರೀದಿಸಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಆರ್.ಕೆ.ಹರೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗ್ಲೆ ಆಲ್ ಮೋಸ್ಟ್ ಶೂಟಿಂಗ್ ಕಂಪ್ಲೀಟ್ ಮಾಡಿರುವ ಫಾರ್ ರಿಜಿಸ್ಟ್ರೇಷನ್ ಸಿನಿಮಾ ತಂಡ ಒಂದು ಹಾಡನ್ನು ಭಾಕಿ ಉಳಿಸಿಕೊಂಡಿದೆ. ನಿಶ್ಚಲ್ ಫಿಲಂಸ್ ಮೂಲಕ  ಎನ್ .ನವೀನ್ ರಾವ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now