• January 2, 2026

ಹ್ಯಾರಿ ಪಾಟರ್ ಖ್ಯಾತಿಯ ನಟ ರಾಬಿ ಕೋಲ್ಟ್ರೇನ್ ನಿಧನ

ಜೇಮ್ಸ್ ಬಾಂಡ್, ಹ್ಯಾರಿ ಪಾಟರ್ ಸೇರಿದಂತೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ್ದ ಸ್ಕಾಟಿಶ್ ನಟ ರಾಬಿ ಕೋಲ್ಟ್ರೇನ್ ನಿಧನರಾಗಿದ್ದಾರೆ. 72 ವರ್ಷ ವಯಸ್ಸಿನ ರಾಬಿ ನಿಧನಕ್ಕೆ ಕಾರಣ ಏನು ಎಂಬುದು ಮಾತ್ರ ತಿಳಿದು ಬಂದಿಲ್ಲ. ರಾಬಿ ಕೋಲ್ಟ್ರೇನ್ ಗೆ ಹ್ಯಾರಿ ಪಾಟರ್ ಸಿನಿಮಾದ ರುಬೆಸ್ ಹ್ಯಾಗ್ರಿಡ್ ಪಾತ್ರ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಕ್ರ್ಯಾಕರ್ ಸಿರೀಸ್ ನಿಂದಲೂ ರಾಬಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದರು. ಶುಕ್ರವಾರ ತಡರಾತ್ರಿ ನಟ ರಾಬಿ ಕೋಲ್ಟ್ರೇನ್ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. 40 ವರ್ಷದಿಂದ ಅವರ ಏಜೆಂಟ್ ಆಗಿ ಕೆಲಸ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ರಾಬಿ ಅವರ ಏಜೆಂಟ್ ಬರೆದುಕೊಂಡಿದ್ದಾರೆ. ರಾಬಿ ಕೋಲ್ಟ್ರೇನ್ ಮಾರ್ಚ್ 30, 1950 ರಂದು ಗ್ಲ್ಯಾಸ್ಗೋದಲ್ಲಿ ಆಂಥೋನಿ ರಾಬರ್ಟ್ ಮೆಕ್‌ಮಿಲನ್ ಆಗಿ ಜನಿಸಿದರು. ನಟ, ಹಾಸ್ಯನಟ ಮತ್ತು ಬರಹಗಾರರಾಗಿ ವೃತ್ತಿಜೀವನ ಆರಂಭಿಸಿದ್ದರು. ಶುಕ್ರವಾರ ರಾತ್ರಿ ಸ್ಕಾಟ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದು, ರಾಬಿಯವರು ಮಾಜಿ ಪತ್ನಿ ರೋನಾ ಗೆಮ್ಮೆಲ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ನಟ ರಾಬಿ ಕೋಲ್ಟ್ರೇನ್‍ ಜನಪ್ರಿಯ ಟಿವಿ ಸರಣಿ ಕ್ರ್ಯಾಕರ್‌ನಲ್ಲಿ ನಟಿಸುವ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಈ ಸಿರೀಸ್‍ನಲ್ಲಿ ಅವರು ಅಪರಾಧ-ಪರಿಹರಿಸುವ ಮನಶ್ಶಾಸ್ತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು.  ಅವರ ಅದ್ಭುತ ಅಭಿನಯಕ್ಕೆ  ಮೂರು ವರ್ಷಗಳ ಕಾಲ ಬ್ರಿಟಿಷ್ ಅಕಾಡೆಮಿ ಟೆಲಿವಿಷನ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now