ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಕಾಂತಾರ’ ಹಿಂದಿ ರಿಲೀಸ್ ಗೆ ಕೌಂಟ್ ಡೌನ್: 2500 ಸ್ಕ್ರೀನ್ ಗಳಲ್ಲಿ ರಿಷಬ್ ಶೆಟ್ಟಿ ಅಬ್ಬರ
ಇದೇ ಅ.14ರಂದು ಶುಕ್ರವಾರ ಕಾಂತಾರ ಹಿಂದಿಯಲ್ಲಿ ತೆರೆಗೆ ಬರಲಿದೆ. ಬರೋಬ್ಬರಿ 2500 ಪರದೆಗಳಲ್ಲಿ ಕಾಂತಾರ ಹಿಂದಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಸೆಪ್ಟೆಂಬರ್ 30ರಂದು ಬಿಡುಗಡೆ ಆದ ಕಾಂತಾರ ಸಿನಿಮಾವನ್ನು ಕನ್ನಡ ವರ್ಷನ್ ನಲ್ಲಿನೋಡಿ ಪರಭಾಷೆಯ ಮಂದಿಯೂ ಮೆಚ್ಚಿಕೊಂಡಿದ್ದರು. ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಡಬ್ಬಿಂಗ್ ಗೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಇದೀಗ ಹಿಂದಿಗೆ ಡಬ್ ಆಗಿದ್ದು ಬಿಡುಗಡೆಗೆ ಇನ್ನೂ ಎರಡೇ ಎರಡು ದಿನ ಮಾತ್ರವೇ ಭಾಕಿ ಇದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕೆ.ಜಿ.ಎಫ್ 2’ ಚಿತ್ರವನ್ನು ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ಕಾಂತಾರ ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಮತ್ತೆ ಹೊಂಬಾಳೆ ಬ್ಯಾನರ್ ಸದ್ದು ಮಾಡುತ್ತಿದೆ.
