• June 4, 2026

ನಿಖಿಲ್ ಕುಮಾರಸ್ವಾಮಿ ಜೊತೆ ನೀವು ನಟಿಸ್ಬೇಕು? ಹಾಗಾದ್ರೆ ನೀವು ಮಾಡಬೇಕಿರೋದಿಷ್ಟೇ

ಸ್ಯಾಂಡಲ್ ವುಡ್ ಯುವರತ್ನ ನಟ ನಿಖಿಲ್ ಕುಮಾರಸ್ವಾಮಿ ರೈಡರ್ ಸಿನಿಮಾದ ಬಳಿಕ ಕೊಂಚ ಬಿಡುವು ಪಡೆದುಕೊಂಡಿದ್ದು ಇದೀಗ ಮತ್ತೆ ಸಿನಿಮಾಗೆ ಮರಳಿದ್ದಾರೆ. ಮುದ್ದು ಮಗನ ಜೊತೆ ಕಾಲ ಕಳೆಯುತ್ತಿರುವ ನಿಖಿಲ್ ಇದೀಗ ತಮ್ಮದೇ ಹೋಮ್ ಬ್ಯಾನರ್ ಚೆನ್ನಾಂಬಿಕಾ ಫಿಲ್ಮ್ಸ್ ಅಡಿಯಲ್ಲಿ ಹೊಸ ಸಿನಿಮಾಗೆ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೈಡರ್ ಸಿನಿಮಾದ ಬಳಿಕ ನಿಖಿಲ್ ಕುಮಾರಸ್ವಾಮಿ ನಟನೆಯ ಯದುವೀರ್ ಸಿನಿಮಾ ಶುರುವಾಗಬೇಕಿತ್ತು. ಆದರೆ ಅದು ಕಾರಣಾಂತರಗಳಿಂದ ಡಿಲೇ ಆಗಿದೆ. ಹಾಗಾಗಿ ಇದೀಗ ಹೊಸ ಸಿನಿಮಾದ ಸಿದ್ದತೆಯಲ್ಲಿ ನಿಖಿಲ್ ತೊಡಗಿಕೊಂಡಿದ್ದಾರೆ. ಅಲ್ಲದೆ ನಿಖಿಲ್ ನಟನೆಯ ಸಿನಿಮಾದಲ್ಲಿ ನೀವು ಕೂಡ ನಟಿಸುವ ಅವಕಾಶಕವನ್ನು ನೀಡಲಾಗಿದೆ. ಸಿನಿಮಾದಲ್ಲಿ ನಟಿಸಬೇಕು ಎಂಬ ಆಸಕ್ತಿ ಇರುವವರಿಗೆ ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್ ಒಳ್ಳೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.  ಅನಿತಾ ಕುಮಾರಸ್ವಾಮಿ ನಿರ್ಮಾಣದ ಸಿನಿಮಾದಲ್ಲಿ ನಟಿಸಲು ಹೊಸ ಪ್ರತಿಭೆಗಳಿಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದ್ದೆ. ಜಾಗ್ವಾರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಿಖಿಲ್ ಕುಮಾರಸ್ವಾಮಿ ಬಳಿಕ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಹಾಗೂ ರೈಡರ್ ಸಿನಿಮಾದಲ್ಲಿ ನಟಿಸಿದ್ದು ಇದೀಗ ಐದನೇ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ. ನಿಖಿಲ್ ಚಿತ್ರದಲ್ಲಿ ನಟಿಸಲು ಅನುಭವಿ ಕಲಾವಿದರ ಜೊತೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಜೊತೆಗೆ ಡ್ಯಾನ್ಸ್ ಹಾಗೂ ಫೈಟ್ ಕಲಿತಿರುವವರಿಗೆ ವಿಶೇಷ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ನೀವು ನಿಖಿಲ್ ನಟನೆಯ ಮುಂದಿನ ಸಿನಿಮಾದಲ್ಲಿ ನಟಿಬೇಕು ಅಂದರೆ ನಿಮ್ಮ ಸ್ವವಿವರ, ಫೋಟೋ ಜೊತೆಗೆ ಒಂದು ನಿಮಿಷದ ನಟನೆಯ ವಿಡಿಯೋವನ್ನು ಚೆನ್ನಾಂಬಿಕಾ ಫಿಲ್ಮ್ಸ್ ಇಮೇಲ್ ಐಡಿಗೆ ಮೇಲ್ ಮಾಡಿ. ಅರ್ಹ ಪ್ರತಿಭೆಗಳನ್ನು ಆಡಿಷನ್ ಗೆ ಕರೆಯಲಾಗುತ್ತಿದೆ. ಆಡಿಷನ್ ನಲ್ಲಿ ಆಯ್ಕೆಯಾದವರು ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುವ ಇನ್ನೂ ಹೆಸರಿಡ ನಿಖಿಲ್ ನಟನೆಉ ಮುಂದಿನ ಸಿನಿಮಾಗೆ ಆಯ್ಕೆಯಾಗಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now