• January 1, 2026

ರಿಷಬ್ ಶೆಟ್ಟಿ ಎದುರಿಗೆ ಬಂದ್ರೆ ಕಾಲಿಗೆ ಬೀಳುತ್ತೇನೆ: ನಟ ನವೀನ್ ಕೃಷ್ಣ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಬಗ್ಗೆ ಎಲ್ಲೆಡೆ ಮೆಚ್ಚುಗೆ ಕೇಳಿ ಬರ್ತಿದೆ. ಕರಾವಳಿಯ ಪಂಬುರ್ಲಿ ಭೂತ ಕೋಲದ ಕುರಿತಾದ ಸಿನಿಮಾವನ್ನು ದೇಶ, ವಿದೇಶದಲ್ಲೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದೀಗ ಸಿನಿಮಾ ನೋಡಿದ ನಟ ನವೀನ್ ಕೃಷ್ಣ ರಿಷಬ್ ಶೆಟ್ಟಿ ನಟನೆಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಕಾಂತಾರ ಸಿನಿಮಾ ಬಿಡುಗಡೆ ಆಗಿ ಒಂದು ವಾರ ಕಳೆದಿದ್ದು ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಈಗಾಗ್ಲೆ ಕಾಂತಾರ ಸಿನಿಮಾದ ಡಬ್ಬಿಂಗ್ ಗೆ ಪರಭಾಷೆಯಿಂದ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಜೊತೆಗೆ ಹಿಂದಿಯ ಕಾಂತಾರ ಸಿನಿಮಾದ ಟ್ರೈಲರ್ ಬಿಡುಗಡೆಗೆ ಇನ್ನೋಂದು ದಿನ ಮಾತ್ರವೇ ಭಾಕಿ ಇದೆ. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಹ್ಯಾಟ್ಸ್ ಆಫ್ ಹೇಳ್ತಿದ್ದಾರೆ. ಪರಭಾಷೆಯ ಕಲಾವಿದರು ರಿಷಬ್ ಆಕ್ಟೀಂಗ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸದ್ಯ ಕನ್ನಡದ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಪುತ್ರ ನಟ ನವೀನ್ ಕೃಷ್ಣ ಕೂಡ ‘ಕಾಂತಾರ’ ಸಿನಿಮಾ ನೋಡಿ ಬೆರಗಾಗಿದ್ದಾರೆ. “ರಿಷಬ್ ಶೆಟ್ಟಿಯವರೇ ನೀವ್ ಎದುರಿಗೆ ಸಿಕ್ಕ್ರೆ ಖಂಡಿತ ನಿಮ್ಮ ಕಾಲ್ ಮುಗಿವೆ. ಅದು ನಿಮಗಲ್ಲ ನಿಮ್ಮ ಕಲೆಗೆ. ” ನನ್ನ ಕಾಡ ಮಕ್ಕಳನ್ನ ನಿನ್ನ ಮಡಿಲಿಗೆ ಹಾಕುತ್ತಿರುವೆ ತಾಯಿಯ ಹಾಗೆ ಕಾಪಾಡು‌ ಅಂತ ಮಾತು ತೊಗೋತೀರಲ್ಲಾ. ಅದು‌ ಅಭಿನಯ ಅಲ್ಲವೇ ಅಲ್ಲಾ. ಜೀವಿಸಿದ ಕಲೆಗಾರ ರಿಷಬ್ ಶೆಟ್ಟಿ” ಎಂದು ನವೀನ್ ಕೃಷ್ಣ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ನವೀನ್ ಕೃಷ್ಣ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಧನ್ಯವಾದ ಸರ್ ಎಂದು ಬರೆದುಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now