• March 14, 2026

ಅಭಿಮಾನಿಯ ಮಗುವಿಗೆ ಅಪ್ಪು ಎಂದು ನಾಮಕರಣ ಮಾಡಿದ ಶಿವರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ 10 ತಿಂಗಳಾಗಿದೆ. ಆದರೆ ಇಂದಿಗೂ ಲಕ್ಷಾಂತರ ಅಭಿಮಾನಿಗಳ ಮನಸ್ಸಲ್ಲಿ ಅಪ್ಪು ಅಮರರಾಗಿದ್ದಾರೆ. ಅಪ್ಪು ಹೆಸರನ್ನು ಜೀವಂತವಾಗಿಡುವ ಕೆಲಸವನ್ನು ಅವರ ಅಭಿಮಾನಿಗಳು ಮಾಡ್ತಿದ್ದಾರೆ. ಇದೀಗ ನಟ ಶಿವರಾಜ್ ಕುಮಾರ್ ಮಗುವೊಂದಕ್ಕೆ ಅಪ್ಪು ಹೆಸರನ್ನು ನಾಮಕರಣ ಮಾಡಿದ್ದಾರೆ. ಅಭಿಮಾನಿಗಳು ಅಪ್ಪು ಅವರನ್ನು ನಟ ಶಿವರಾಜ್ ಕುಮಾರ್ ಅವರಲ್ಲಿ ಕಾಣುತ್ತಿದ್ದಾರೆ. ಅಲ್ಲದೆ ಅಪ್ಪು ಅವರು  ಬಿಟ್ಟು ಹೋಗಿರುವ ಕೆಲಸಗಳನ್ನು ಶಿವರಾಜ್ ಕುಮಾರ್ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಮೈಸೂರಿನ ಮಕ್ಕಳ ಜವಬ್ದಾರಿಯನ್ನು ಶಿವಣ್ಣ ದಂಪತಿಗಳು ನಡೆಸಿಕೊಂಡು ಹೋಗ್ತಿದ್ದಾರೆ. ಅದೆಷ್ಟೋ ಮಂದಿ ತಮ್ಮ ಮಕ್ಕಳಲ್ಲಿ ಪುನೀತ್ ಅವರನ್ನು ಕಾಣುತ್ತಿದ್ದಾರೆ. ಶಿವಣ್ಣ ಅವರ ಕುಟುಂಬದ ಅಭಿಮಾನಿಯೊಬ್ಬರು ದೊಡ್ಮನೆಗೆ ಬಂದು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ. ಇದೀಗ ಮನೆಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪು ಅಂತಾ ಶಿವಣ್ಣ ಹೆಸರಿಟ್ಟಿದ್ದಾರೆ. ಬೀದರ್‌ನಿಂದ ಬೆಂಗಳೂರಿಗೆ ಆಗಮಿಸಿದ ಅಭಿಮಾನಿ ದಂಪತಿಯ ಮಗುವಿಗೆ ಅಪ್ಪು ಅಂತಾ ನಾಮಕರಣ ಮಾಡಿ, ದಂಪತಿಗೆ ಆತಿಥ್ಯ ನೀಡಿದ್ದಾರೆ. ಶಿವಣ್ಣ ನಡೆ ನೋಡಿ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now