• January 2, 2026

ನಿನ್ ಬಾಯಿಗೆ ಪೊರಕೆ ಇಡ್ಬೇಕಾ? ಸೋನು ಮೇಲೆ ಗರಂ ಆದ ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಮನೆಯಲ್ಲಿ ಒಬ್ಬರ ಮೇಲೊಬ್ಬರು ಕೂಗಾಡುವುದು ಕಿರುಚಾಡುವುದು ಇದ್ದಿದ್ದೆ. ಮೊನೆ ತಾನೆ ಸೋನು ಗೌಡ ಕಳಪೆ ಪಟ್ಟ ತೊಟ್ಟು ಬಿಗ್ ಬಾಸ್ ಮನೆಯ ಜೈಲು ಸೇರಿದ್ದಾಗ ಆಕೆಯನ್ನು ಸಮಾಧಾನ ಮಾಡಿದ್ದ ಆರ್ಯವರ್ಧನ್ ಗುರೂಜಿ ಇಂದು ಸೋನು ಗೌಡ ಮೇಲೆ ಫುಲ್ ಗರಂ ಆಗಿದ್ದಾರೆ. ತೀ ಹೆಚ್ಚು ಮಾತನಾಡುವ ವಿಚಾರವಾಗಿ ಆರ್ಯವರ್ಧನ್ ಗುರೂಜಿ ಮತ್ತು ಸೋನು ಶ್ರೀನಿವಾಸ್ ಗೌಡ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆ ಆಗಿದೆ. ಈ ವೇಳೆ ಆರ್ಯವರ್ಧನ್ ಆಡಿದ ಕೆಲವೊಂದು ಮಾತುಗಳಿಂದ ಸೋನು ಗೌಡ ನೊಂದುಕೊಂಡಿದ್ದ ಆ ರೀತಿ ಮಾತನಾಡಬೇಡಿ ಎಂದಿದ್ದಾರೆ. ಆರ್ಯವರ್ಧನ್ ಗುರೂಜಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಅದು ಜಗಳಕ್ಕೆ ತಿರುಗಿದ್ದು ಈ ವೇಳೆ ಸುಮ್ಮನಿರುವಂತೆ ಸೋನು ಶ್ರೀನಿವಾಸ್ ಗೌಡಗೆ ಗುರೂಜಿ ಹೇಳುತ್ತಲೇ ಇದ್ದರು. ಆದರೆ, ಸೋನು ಮಾತನಾಡುತ್ತಲೇ ಹೋಗಿದ್ದಾರೆ. ಜೊತೆಗೆ ನೀವು ಮಾತನಾಡುತ್ತೀರಿ ಎಂದು ಗುರೂಜಿಗೆ ಹೇಳಿದ್ದಾರೆ. ಸೋನು ಗೌಡರ ನಾನ್ ಸ್ಟಾಪ್ ಮಾತುಗಳನ್ನು ಕೇಳಿದ ಗುರೂಜಿ ಕೋಪಗೊಂಡು ‘ನಿನ್ ಬಾಯಿಗೆ ಪೊರಕೆ ಇಡ್ಬೇಕಾ? ಸುಮ್ನಿರ್ತಿಯಾ’ ಎಂದು ಆವಾಜ್ ಹಾಕಿದ್ದಾರೆ. ಅದನ್ನು ಕೇಳಿಸಿಕೊಂಡ ಸೋನು, ನೀವು ಈ ರೀತಿ ಮಾತನಾಡಬೇಡಿ ಎಂದು ತಿರುಗೇಟು ನೀಡುತ್ತಾರೆ. ಸೋನು ಗೌಡ ಹೆಚ್ಚು ಮಾತನಾಡುತ್ತಾರೆ,ಮನೆಯಲ್ಲಿರುವ ಸ್ಪರ್ಧಿಗಳಿಗೆ ಮರ್ಯಾದೆ ಕೊಡುವುದಿಲ್ಲ ಎನ್ನುವುದು ಮನೆಯ ಇತರ ಸದಸ್ಯರ ವಾದ. ಅಲ್ಲದೆ ಇದೇ ವಿಚಾರವಾಗಿ ಸುದೀಪ್ ಕೂಡ ಸೋನು ಗೌಡಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಮಾತಿಗೆ ಮಾತು ಬೆಳೆಸಿ ಮನೆಯಲ್ಲಿ ಕೆಲ ಕಾಲ ಗಲಾಟೆ ಮಾಡಿಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now