ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಜೈಲಿನಿಂದ ಹೊರ ಬಂದ ಖೈದಿಗಳಿಗೆ ಗುಡ್ ನ್ಯೂಸ್
ಜೈಲಿನಲ್ಲಿರುವಾಗ ಸೌಜನ್ಯದಿಂದ ವರ್ತನೆ ಮಾಡಿರುವ ಹಾಗೂ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಹೊರ ಬರುವ ಕೈದಿಗಳಿಗೆ ಉದ್ಯೋಗಾವಶವನ್ನ ಕಲ್ಪಿಸಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಜೈಲಿನ ಹಿರಿಯ ಅಧಿಕಾರಿಗಳು ಪೆಟ್ರೋಲಿಯಂ ಸಂಸ್ಥೆಗಳಾದ ಭಾರತ್ ಪೆಟ್ರೋಲಿಯಂ ಸಂಸ್ಥೆ ಸೇರಿದಂತೆ ಎರಡು ಮೂರು ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಜೈಲಿನಿಂದ ಹೊರ ಬರುವ ಖೈದಿಗಳಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಕೆಲಸ ಕೊಡಿಸಲು ಜೈಲಿನ ಅಧಿಕಾರಿಗಳು ನಿರ್ಧರಿಸಿದ್ದಾರೆ. ಒಟ್ನಲ್ಲಿ ಜೈಲಿನಿಂದ ಸನ್ನಡತೆ ಆಧಾರದಲ್ಲಿ ಹೊರ ಬಂದ ಖೈದಿಗಳು ಮತ್ತೆ ಹಳೆ ಚಾಳಿ ಮುಂದುವರೆಸದೆ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಜೈಲಿನ ಅಧಿಕಾರಿಗಳು ಮುಂದಾಗಿದ್ದಾರೆ.
