ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಗಾಳಿಪಟ 2’ ಪ್ರೀಮಿಯರ್ ಗೆ ಭರ್ಜರಿ ರೆಸ್ಪಾನ್ಸ್: ರಿಲೀಸ್ ಗೂ ಮೊದಲೇ ಸದ್ದು ಮಾಡುತ್ತಿದ್ದೆ ಭಟ್ರು ಟೀಂ
ಗಾಳಿಪಟ 2 ಸಿನಿಮಾ ರಿಲೀಸ್ ಗೆ ಇನ್ನೂ ಕೆಲವೇ ಕೆಲವು ಗಂಟೆಗಳು ಮಾತ್ರವೇ ಭಾಕಿ ಇದೆ. ಈಗಾಗಲೇ ಟಿಕೇಟ್ ಬುಕ್ಕಿಂಗ್ ಆರಂಭವಾಗಿದ್ದು ಸಿನಿ ರಸಿಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.
ಈಗಾಗಲೇ ಗಾಳಿಪಟ 2 ಚಿತ್ರದ ಎಲ್ಲಾ ಪ್ರೀಮಿಯರ್ ಶೋ ಭರ್ತಿಯಾಗಿದ್ದು,ಇನ್ನಷ್ಟು ಪ್ರೀಮಿಯರ್ ಶೋ ಆಯೋಜನೆ ಮಾಡುವಂತೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಕಾನ್ಸೆಪ್ಟ್ ಹೆಚ್ಚಾಗುತ್ತಿದೆ. ಮೂಲ ಭಾಷೆಯ ಜೊತೆಗೆ ಇನ್ನೂ ಕೆಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋ ಮೂಲಕ ಪರಭಾಷೆಯಲ್ಲೂ ಸದ್ದು ಮಾಡುತ್ತಿದ್ದಾರೆ. ಆದ್ರೆ ಗಾಳಿಪಟ 2 ಸಿನಿಮಾ ಮಾತ್ರ ಒಂದೇ ಭಾಷೆಯಲ್ಲಿ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ.
ಹಾಗೆ ನೋಡಿದ್ರೆ ‘ಗಾಳಿಪಟ 2’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಹೌದು. ಈ ಸಿನಿಮಾ ಮೂಲಕ ಕನ್ನಡ ಭಾಷೆ ಪ್ಯಾನ್ ಇಂಡಿಯಾ ಆಗುತ್ತಿರೋದು ಮತ್ತೊಂದು ವಿಶೇಷ್. ದೇಶ ವಿದೇಶದಲ್ಲೂ ಗಾಳಿಪಟ 2 ಸಿನಿಮಾ ಕನ್ನಡ ಭಾಷೆಯಲ್ಲೇ ರಿಲೀಸ್ ಆಗುತ್ತಿರೋದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
2008ರಲ್ಲಿ ಗಾಳಿಪಟ ಸಿನಿಮಾ ಬಿಡುಗಡೆ ಆಗಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಬರೋಬ್ಬರಿ 14 ವರ್ಷಗಳ ಬಳಿಕ ಸಿನಿಮಾ ತೆರೆಗೆ ಬರುತ್ತಿದ್ದು ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
