• January 1, 2026

ತೆರೆ ಮೇಲೆ ಪರಮಾತ್ಮನ ದರ್ಶನ: ಗಂಧದ ಗುಡಿ ನೋಡಿ ಅಪ್ಪುಗಾಗಿ ಕಣ್ಣಿರಿಟ್ಟ ಫ್ಯಾನ್ಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಇಂದು ಅದ್ದೂರಿಯಾಗಿ ತೆರೆಕಂಡಿದೆ. ನಿನ್ನೆ ಸಾಕಷ್ಟು ಕಡೆಗಳಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದ್ದು ಸಿನಿಮಾ ನಟ, ನಟಿಯರು, ತಂತ್ರಜ್ನರು ಸೇರಿದಂತೆ ಸಾಕಷ್ಟು ಮಂದಿ ಚಿತ್ರ ವೀಕ್ಷಿಸಿದ್ದಾರೆ. ಇಂದು ಬೆಳ್ಳಿ ತೆರೆ ಮೇಲೆ ಪರಮಾತ್ಮನ  ಆರ್ಭಟ ಶುರುವಾಗಿದ್ದು ಅಭಿಮಾನಿಗಳು ಮುಗಿ  ಬಿದ್ದು ಥಿಯೇಟರ್ ಗೆ ಎಂಟ್ರಿಕೊಡ್ತಿದ್ದಾರೆ. ಇಂದು ಬೆಳಗ್ಗೆ ಆರು ಗಂಟೆಯಿಂದಲೇ ಥಿಯೇಟರ್ ನಲ್ಲಿ ರಾಜಕುಮಾರ ರಾರಾಜಿಸುತ್ತಿದ್ದಾನೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಗಂಧದ ಗುಡಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಲ್ಲದೆ ಈ ಸಂಭ್ರಮದ ಸಮಯದಲ್ಲಿ ಅಪ್ಪು ನಮ್ಮೊಂದಿಗಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಖಾಸಿ ಮಾಲ್ ನಲ್ಲಿ ನಡೆದ ಪ್ರೀಮಿಯರ್ ಶೋ ಗಣ್ಯರ ಜೊತೆ ಕೂತು ಅಶ್ವಿನಿ ಪುನೀತ್ ರಾಜ್ ಕುಮಾರ್ ವೀಕ್ಷಿಸಿದ್ದಾರೆ. ಇನ್ಫೋಸಿಸ್ ನ ಸುಧಾಮೂರ್ತಿ , ನಟಿ ರಮ್ಯಾ, ಸಂಗೀತಾ ಶೃಂಗೇರಿ, ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ದೇವರಾಜ್, ಪ್ರಜ್ವಲ್ ದೇವರಾಜ್ ಸೇರಿದಂತೆ ಸಾಕಷ್ಟು ಮಂದಿ ಚಿತ್ರ ವೀಕ್ಷಿಸಿದ್ದಾರೆ. ಇನ್ನೂ ಇಂದು ಅಪ್ಪು ಫೋಟೋ ಇರುವ ಟೀಶರ್ಟ್ ತೊಟ್ಟು ಬಂದು ಅಭಿಮಾನಿಗಳು ಥಿಯೇಟರ್ ಮುಂದೆ ಸಂಭ್ರಮಿಸಿದ್ದಾರೆ. ಜೊತೆಗೆ ಅಪ್ಪು ಅಪ್ಪು ಎಂದು ಜೈಕಾರ ಕೂಗಿದ್ದಾರೆ. ಅಲ್ಲದೆ ಚಿತ್ರ ನೋಡಿ ಸಾಕಷ್ಟು ಮಂದಿ ಅಪ್ಪು ನೆನೆದು ಕಣ್ಣೀರಿಟ್ಟಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now